ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

ಶಿಡ್ಲಘಟ್ಟದ ಡಾಲ್ಫಿನ್​ ವಿದ್ಯಾಸಂಸ್ಥೆಯ ಶಾಲಾಸಂಸತ್​ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಿರ್ದೇಶಕ ಎನ್​.ಅಶೋಕ್​, ಸಂಸ್ಥಾಪಕ ಎನ್​.ನಾಗರಾಜ್​, ವ್ಯವಸ್ಥಾಪಕ ನಿರ್ದೇಶಕ ಎನ್​.ಅಶೋಕ್​, ಕಾರ್ಯದರ್ಶಿ ವಿ.ಕೃಷ್ಣಪ್ಪ, ಆಡಳಿತಾಧಿಕಾರಿ ಚಂದನಾ ಅಶೋಕ್​, ಪ್ರಾಂಶುಪಾಲ ಎಲ್​.ಮುನಿಕೃಷ್ಣಪ್ಪ, ಲೆಫ್ಟಿನೆಂಟ್​ ಕರ್ನಲ್​ ಮಲ್ಲಿಕಾರ್ಜುನ ಇತರರಿದ್ದರು.
ಶಿಡ್ಲಘಟ್ಟದ ಡಾಲ್ಫಿನ್​ ವಿದ್ಯಾಸಂಸ್ಥೆಯ ಶಾಲಾಸಂಸತ್​ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನಿರ್ದೇಶಕ ಎನ್​.ಅಶೋಕ್​, ಸಂಸ್ಥಾಪಕ ಎನ್​.ನಾಗರಾಜ್​, ವ್ಯವಸ್ಥಾಪಕ ನಿರ್ದೇಶಕ ಎನ್​.ಅಶೋಕ್​, ಕಾರ್ಯದರ್ಶಿ ವಿ.ಕೃಷ್ಣಪ್ಪ, ಆಡಳಿತಾಧಿಕಾರಿ ಚಂದನಾ ಅಶೋಕ್​, ಪ್ರಾಂಶುಪಾಲ ಎಲ್​.ಮುನಿಕೃಷ್ಣಪ್ಪ, ಲೆಫ್ಟಿನೆಂಟ್​ ಕರ್ನಲ್​ ಮಲ್ಲಿಕಾರ್ಜುನ ಇತರರಿದ್ದರು.
Published on

ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಜತೆಗೆ ಸನ್ನಡತೆ ಮತ್ತು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು, ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಡಾಲ್ಫಿನ್​ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್​.ಅಶೋಕ್​ ತಿಳಿಸಿದರು.

ಡಾಲ್ಫಿನ್​ ವಿದ್ಯಾಸಂಸ್ಥೆಯ ಸಿಬಿಎಸ್ಸಿ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್​ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪದಗ್ರಹಣ ಹಾಗೂ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತಮ ನಾಯಕತ್ವ ಹಾಗೂ ನಾಯಕ ಎನಿಸಿಕೊಂಡವನಿಗೆ ಶಿಸ್ತು, ಆತ್ಮವಿಶ್ವಾಸ, ಸಂವಹನ ಕೌಶಲ ಹಾಗೂ ತಂಡದ ಇತರೆ ಸದಸ್ಯರನ್ನು ಗೌರವಿಸುವ ಗುಣಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಶಿಸ್ತು ಅಳವಡಿಕೊಳ್ಳುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶಾಲಾ ನಾಯಕ ಚರಿತ್​ ವಿಜಯೇಂದ್ರ ಪ್ರಸಾದ್​ ಮಾತನಾಡಿ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪ್ರಾಂಶುಪಾಲರ ಮಾರ್ಗದರ್ಶನದಲ್ಲಿ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ತಿಳಿಸಿದರು.
ನಾಯಕಿ ತೇಜಶ್ರೀ ಮಾತನಾಡಿ, ಶಾಲೆಯಲ್ಲಿ ಶಿಸ್ತು, ಸಂಯಮ ಮತ್ತು ಉತ್ತಮ ನಾಯಕತ್ವವನ್ನು ಬೆಳೆಸುವ ಮೂಲಕ ಶೈಕ್ಷಣಿಕ ವರ್ಷವನ್ನು ಯಶಸ್ವಿಯಾಗಿ ಮುನ್ನಡೆಸುವುದಾಗಿ ಭರವಸೆ ನೀಡಿದರು.
ಶಾಲಾ ಸಂಸತ್​ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಜವಾಬ್ದಾರಿಗಳನ್ನು ವಹಿಸಿದ ಬಳಿಕ ಗ್ರಾಮಾಂತರ ಪೊಲೀಸ್​ ಠಾಣೆಯ ಎಎಸ್​ಐ ನರಸಿಂಹ ಹಾಗೂ ಸಂಸ್ಥಾಪಕ ಎನ್​.ನಾಗರಾಜ್​ ಶಾಲಾ ನಾಯಕರಿಗೆ ಪದಕಗಳನ್ನು ವಿತರಿಸಿದರು.
ಕಾರ್ಯದರ್ಶಿ ವಿ.ಕೃಷ್ಣ್ಣಪ್ಪ ಹಾಗೂ ಡಾಲ್ಫಿನ್​ ಕೆಎಸ್​ಇಇಬಿ ವಿಭಾಗದ ಪ್ರಾಂಶುಪಾಲ ಆರಿಫ್​ ಅಹಮದ್​ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಿದರು. ತರಗತಿ ನಾಯಕರಿಗೆ ಎಲ್​.ಮುನಿಕೃಷ್ಣಪ್ಪ ಮತ್ತು ಆಡಳಿತಾಧಿಕಾರಿ ಚಂದನಾ ಅಶೋಕ್​ ಪದಕಗಳನ್ನು ವಿತರಿಸಿದರು. ಸಿಬಿಎಸ್ಸಿ ವಿಭಾಗದ ಪ್ರಾಂಶುಪಾಲ ಎಲ್​.ಮುನಿಕೃಷ್ಣ್ಣಪ್ಪ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಎನ್​ಸಿಸಿ ತರಬೇತಿ ಶಿಬಿರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net