ಸಂಘದಿಂದ ಸಮಾಜ ಸುಧಾರಣೆ ಕಾರ್ಯಗಳಾಗಲಿ

Let social reform activities be carried out by the association
Let social reform activities be carried out by the association
Published on
ಹುಳಿಯಾರು:ಹುಳಿಯಾರಿನ ಕನಕದಾಸ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್​ಪುಸ್ತಕ ಹಾಗೂ ಕ್ರೀಡಾಸಾಮಗ್ರಿಗಳನ್ನು ವಿತರಿಸಲಾಯಿತು.
ಈ ವೇಳೆ ನಿವೃತ್ತ ಪ್ರಾಂಶುಪಾಲ ಜಿ.ಕೃಷ್ಣಯ್ಯ ಮಾತನಾಡಿ, ಒಂದು ಸಂಘಟನೆ ದಶಕಗಳ ಕಾಲ ನಿರಂತರವಾಗಿ ಬೆಳೆದುಬರುವುದು ಸುಲಭವಲ್ಲ. ಕನಕದಾಸ ಹಿರಿಯ ವಿದ್ಯಾರ್ಥಿಗಳ ಸಂಘವು ಹತ್ತಾರು ವರ್ಷಗಳಿಂದ ವಿದ್ಯಾರ್ಥಿಗಳ ಪ್ರಗತಿಯನ್ನೇ ಧ್ಯೇಯವಾಗಿಸಿಕೊಂಡು ಶ್ರಮಿಸುತ್ತಿದೆ. ಇಂದು ಉಚಿತ ನೋಟ್​ಬುಕ್​ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ದೊಡ್ಡ ಆಸರೆಯಾಗಿದೆ ಎಂದರು.
ನಿವೃತ್ತ ಶಿಕ್ಷಕ ಜಗದೀಶ್​ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಕೇವಲ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ದಶಕಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಗೆ ಉಚಿತ ನೋಟ್​ಬುಕ್​ ವಿತರಣೆ, ಅರ್ಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಯುವಜನರಲ್ಲಿ ಸನ್ಮಾರ್ಗ ಬಿತ್ತಲು ಸ್ವಾಮಿ ವಿವೇಕಾನಂದ ಜಯಂತಿ ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಶಿಕ್ಷಕ ಚಂದ್ರಶೇಖರ್​ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಲು ಕ್ವಿಜ್​ ಸೇರಿದಂತೆ ಅನೇಕ ಸ್ಪರ್ಧೆ ನಡೆಸಿ, ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದರು.
ಶಿವಣ್ಣ, ಚಂದ್ರಣ್ಣ, ವಾಸವಿ ಶಾಲೆಯ ಗಂಗಾಧರಯ್ಯ, ಬಸವೇಶ್ವರ ಶಾಲೆಯ ಮಂಜುನಾಥ್​, ಹಿರಿಯ ವಿದ್ಯಾರ್ಥಿಗಳ ಸಂಘದ ಬಾಲಾಜಿ, ದುರ್ಗರಾಜು, ಕುಮಾರಸ್ವಾಮಿ, ಪುಷ್ಪಲತಾ, ಕಾಟಲಿಂಗಯ್ಯ, ಮಹೇಶಚಾರ್​, ಎನ್​.ಲೋಕೇಶ್​, ಶಿವಣ್ಣ, ನಾಗರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net