ಗ್ರಾಮೀಣ ಕಲೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿ

ಯಾದಗಿರಿ ತಾಲೂಕಿನ ಗೌಡಗೇರಾದಲ್ಲಿ ಶನಿವಾರ ನಡೆದ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಮಂಜುನಾಥ, ಶರಣಪ್ಪ ತೋರಣಕರ, ಕಲಾವಿದರಾದ ಮಲ್ಲು ಕೋಳ್ಯಾರು, ಶಂಕ್ರಪ್ಪ ಹೊನಗುಂಟಿ, ಮಲ್ಲಿಕಾರ್ಜುನ ಸಾಧು, ಮರೆಮ್ಮ ಇತರರಿದ್ದರು.
ಯಾದಗಿರಿ ತಾಲೂಕಿನ ಗೌಡಗೇರಾದಲ್ಲಿ ಶನಿವಾರ ನಡೆದ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಮಂಜುನಾಥ, ಶರಣಪ್ಪ ತೋರಣಕರ, ಕಲಾವಿದರಾದ ಮಲ್ಲು ಕೋಳ್ಯಾರು, ಶಂಕ್ರಪ್ಪ ಹೊನಗುಂಟಿ, ಮಲ್ಲಿಕಾರ್ಜುನ ಸಾಧು, ಮರೆಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಕಲಾವಿದ ಮಂಜುನಾಥ ಒತ್ತಾಸೆ
  • ಗೌಡಗೇರಾದಲ್ಲಿ ಜಾನಪದ ಝೇಂಕಾರ
ಯಾದಗಿರಿ:

ಸಂಗೀತ, ನೃತ್ಯ, ನಾಟಕ, ಬಯಲಾಟ ಹೀಗೆ ದೇಸಿ ಮತ್ತು ಗ್ರಾಮೀಣ ಕಲೆಗಳಿಗೆ ಹೆಚ್ಚಿನ ಉತ್ತೇಜನ ಸಿಗಬೇಕಿದೆ ಎಂದು ಹಿರಿಯ ಕಲಾವಿದ ಮಂಜುನಾಥ ನರಸಪ್ಪ ಹೇಳಿದರು.

ವೀಣಾಶ್ರೀ ಸಂಗೀತ ಮತ್ತು ವಿವಿಧೋದ್ದೇಶ ಸೇವಾ ಸಂಸ್ಥೆ, ಪಳ್ಳಾ ವೆಂಕಟಮ್ಮ ಸ್ವರಮಧುರ ಸಂಗೀತ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಗೌಡಗೇರಾದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಜಾನಪದ ಝೇಂಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಸಿ ಕಲೆಗಳು ಮಾಯವಾಗುತ್ತಿದ್ದು, ವಿದೇಶಿ ಸಂಗೀತ ಕಲೆಗಳಿಗೆ ಜನರು ಹೆಚ್ಚಾಗಿ ಮಾರು ಹೋಗುತ್ತಿದ್ದಾರೆ. ಕಾರಣ ಸರ್ಕಾರಗಳು ಆಯಾ ಭಾಗದ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸಲು ಸಹಕಾರ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಮುಂದಿನ ಪೀಳಿಗೆಗೆ ನಮ್ಮ ಪುರಾತನ ಮತ್ತು ಸಂಸ್ಕೃತಿಯುಳ್ಳ ಕಲೆಗಳ ಮಹತ್ವವೇ ತಿಳಿಯದು ಎಂದರು.
ಸAಸ್ಥೆ ಕಾರ್ಯದರ್ಶಿ ಶರಣಪ್ಪ ಎಂ.ತೋರಣಕರ್ ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆ ಪ್ರಭಾವಶಾಲಿಯಾಗಿ ಬೆಳೆಯುವಲ್ಲಿ ಜಾನಪದ ಕಲೆಗಳು ಪ್ರಮುಖ ಪಾತ್ರ ವಹಿಸಿವೆ. ರೈತರು ರಾಶಿ ಮಾಡುವಾಗ ಹಂತಿ ಪದ, ತಾಯಿ ಮಗುವಿಗೆ ಹಾಲುಣಿಸುವಾಗ ಜೋಗುಳ ಪದ ಹಾಡುವ ಮೂಲಕ ಈ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದರು. ಆದರೀಗ ಎಲ್ಲದಕ್ಕೂ ಮೊಬೈಲ್‌ನಲ್ಲಿ ಹಾಡುಗಳನ್ನು ಹಾಕುತ್ತಿರುವುದರಿಂದ ಜಾನಪದ ಕಲೆ ನಶಿಸಿಹೋಗುತ್ತಿದೆ. ಕಾರಣ ಕಲೆಗಳನ್ನು ಉಳಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಲಾವಿದರಾದ ಮಲ್ಲು ಕೋಳ್ಯಾರು, ಶಂಕ್ರಪ್ಪ ಹೊನಗುಂಟಿ, ಮಲ್ಲಿಕಾರ್ಜುನ ಸಾಧು, ಮರೆಮ್ಮ, ನಾಗಮ್ಮ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net