ಸುಭದ್ರ ಸಮಾಜ ನಿಮಾರ್ಣಕ್ಕೆ ನಿವೃತ್ತ ನೌಕರರು ಶ್ರಮಿಸಲಿ society

ಸುಭದ್ರ ಸಮಾಜ ನಿಮಾರ್ಣಕ್ಕೆ ನಿವೃತ್ತ ನೌಕರರು ಶ್ರಮಿಸಲಿ society
ಸುಭದ್ರ ಸಮಾಜ ನಿಮಾರ್ಣಕ್ಕೆ ನಿವೃತ್ತ ನೌಕರರು ಶ್ರಮಿಸಲಿ society
Published on
ಮುಳಬಾಗಿಲು: ಸದೃಢ ಸಮಾಜದ ಕಾವಲುಗಾರರಾಗಿ ನಿವೃತ್ತ ನೌಕರರು, ಹಿರಿಯ ನಾಗರಿಕರು ಕಾರ್ಯನಿರ್ವಹಿಸುವ ಮೂಲಕ ಸದೃಢ ದೇಶ ನಿಮಾರ್ಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಿವೃತ್ತ ತಹಸೀಲ್ದಾರ್​ ಜಯರಾಮರೆಡ್ಡಿ ತಿಳಿಸಿದರು. society
ನಗರದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿ, ನಿವೃತ್ತ ನೌಕರರು ಸದಾ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ರಚನಾತ್ಮಕ ಚಟುವಟಿಕೆಗಳ ಮೂಲಕ ಕ್ರಿಯಾಶೀಲರಾಗಿರಬೇಕು ಎಂದು ಸಲಹೆ ನೀಡಿದರು.
ನಿವೃತ್ತ ನೌಕರರ ಸಂಘದ ಜಿಲ್ಲಾ ಕೋಶಾಧ್ಯಕ್ಷ ಕೆ.ಗೋಪಾಲ ರೆಡ್ಡಿ ಮಾತನಾಡಿ, ಯಾವುದೇ ಸಂಘ&ಸಂಸ್ಥೆ ಚಟುವಟಿಕೆಗಳು ಪಾರದರ್ಶಕತೆಯಿಂದ ಕೂಡಿರಬೇಕು. ಅದರಲ್ಲೂ ನಿವೃತ್ತ ನೌಕರರ ಸಂಘ ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ. ಜನಾರ್ಧನ್​ ಮಾತನಾಡಿ, ಉತ್ತಮ ಸೇವೆ ಸಲ್ಲಿಸುವವರನ್ನು ಗುರುತಿಸಿ ಸನ್ಮಾನಿಸುವುದರಿಂದ ಅವರು ಮತ್ತಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾರೆ ಎಂದರು.
ವಿಜಯವಾಣಿ ತಾಲೂಕು ವರದಿಗಾರ ಎ. ಅಪ್ಪಾಜಿಗೌಡ ಅವರನ್ನು ತಾಲೂಕು ನಿವೃತ್ತ ನೌಕರರ ಸಂಘದಿಂದ ಗೌರವಿಸಲಾಯಿತು.
ಸಂಘದ ಖಜಾಂಚಿ ರಾಷ್ಟ್ರ ಪ್ರಶಸ್ತಿ ಪುರಸತ ಎಸ್​. ಜಯರಾಮ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ತಾಲೂಕು ಗೌರವಾಧ್ಯಕ್ಷ ಎಂ.ನಂಜುಂಡಪ್ಪ, ಉಪಾಧ್ಯಕ್ಷ ಎನ್​. ವೆಂಕಟರಮಣಪ್ಪ, ಎಸ್​. ಆರ್​. ವೆಂಕಟೇಶಪ್ಪ, ಆರ್​. ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಮುನಿರತ್ನಯ್ಯ, ಸಂಘಟನಾ ಕಾರ್ಯದರ್ಶಿ ಯಾನಾದಹಳ್ಳಿ ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಎಲ್​. ಶಿವಣ್ಣ, ವೆಂಕಟರಾಮರೆಡ್ಡಿ, ಸಾಂಸತಿಕ ಕಾರ್ಯದರ್ಶಿ ಜಮ್ಮನಹಳ್ಳಿ ವೆಂಕಟೇಶ್​, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿಗಳ ಚಾಂದ್​ ಪಾಷಾ, ಶ್ರೀನಿವಾಸ ಗೌಡ, ಸಿದ್ದಲಿಂಗಯ್ಯ, ನಿವೃತ್ತ ಎಎಸ್​ಐಗಳಾದ ನಾಗರಾಜ್​, ನಾಗಭೂಷಣಂ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net