ಗಡಿ ಜನರ ಹೃದಯ ಭಾಷೆ ಕನ್ನಡವಾಗಲಿ. Kannada

Kannada ಮುಳಬಾಗಿಲು ತಾಲೂಕು ಗುಡಿಪಲ್ಲಿ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ಕನ್ನಡ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ  ರಾಜ್ಯೋತ್ಸವವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮಾಜಿ ಅಧ್ಯಕ್ಷ ನಾಗಾನಂದ ಕೆಂಪರಾಜ್​ ಉದ್ಘಾಟಿಸಿದರು.
Kannada ಮುಳಬಾಗಿಲು ತಾಲೂಕು ಗುಡಿಪಲ್ಲಿ ಗ್ರಾಮದಲ್ಲಿ ಶ್ರೀ ರಾಜರಾಜೇಶ್ವರಿ ಕನ್ನಡ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮಾಜಿ ಅಧ್ಯಕ್ಷ ನಾಗಾನಂದ ಕೆಂಪರಾಜ್​ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • Kannada
  • ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮಾಜಿ ಅಧ್ಯಕ್ಷ ನಾಗಾನಂದ ಕೆಂಪರಾಜ್​ ಹೇಳಿಕೆ
ಮುಳಬಾಗಿಲು: ಇಲ್ಲಿನ ಆಡು ಭಾಷೆ ತೆಲುಗು ಆದರೂ ಲಿಖಿತ ಭಾಷೆ, Kannada
ಓದಿನ ಭಾಷೆ ಕನ್ನಡವಾಗಿರುವುದು ಗಡಿನಾಡಿನಲ್ಲಿ ಕನ್ನಡ ಪ್ರಜ್ವಲಿಸಲು ಪ್ರಮುಖ ಕಾರಣವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮಾಜಿ ಅಧ್ಯಕ್ಷ ನಾಗಾನಂದ ಕೆಂಪರಾಜ್​ ಹೇಳಿದರು.
ತಾಲೂಕಿನ ಗಡಿ ಭಾಗದಲ್ಲಿರುವ ಗುಡಿಪಲ್ಲಿಯಲ್ಲಿ ಶ್ರೀ ರಾಜರಾಜೇಶ್ವರಿ ಕನ್ನಡ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿ, ಹಲವು ಗುಡಿಗಳನ್ನು ಹೊಂದಿದ್ದ ಗುಡಿಗಳ ಹಳ್ಳಿ ಆಡು ಭಾಷೆಯಲ್ಲಿ ಗುಡಿಪಲ್ಲಿಯಾಗಿದೆ.
1 ಕಿಮೀ. ದೂರದಲ್ಲಿ ಆಂಧ್ರದ ಜನ ಇದ್ದರೂ ಇಲ್ಲಿನ ಜನರು ಕನ್ನಡವನ್ನು ಹೃದಯ ಭಾಷೆಯನ್ನಾಗಿ ಪ್ರೀತಿಸುತ್ತಿದ್ದಾರೆ.
ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣ ಕೊಡಿಸುವ ಮೂಲಕ ಆದರ್ಶರಾಗಿದ್ದಾರೆ. ನಮ್ಮ ಅವಧಿಯಲ್ಲಿ ಜಿಲ್ಲೆಯ ಎಲ್ಲ ಗಡಿ ಗ್ರಾಮಗಳಲ್ಲಿ ಕನ್ನಡದ ಅಸ್ಮಿತೆ ಎತ್ತಿ ತೋರಿಸಲು ಗಡಿ ದ್ವಾರಗಳ ಬಳಿ ಕನ್ನಡ ಧ್ವಜ ಸ್ತಂಭ ಸ್ಥಾಪಿಸಿ ಅರಿಶಿಣ-ಕುಂಕುಮ ಬಣ್ಣದ ಕನ್ನಡದ ಧ್ವಜ ಸದಾ ಹಾರಾಡಿಸುವ ಮೂಲಕ ನೆರೆ ರಾಜ್ಯದಿಂದ ಆಗಮಿಸುವವರಿಗೆ ಸ್ವಾಗತ ಕೋರುವಂತಾಗಿತ್ತು ಎಂದರು.
ಭಾರತೀಯ ಕಿಸಾನ್​ ಸಂಘದ ಜಿಲ್ಲಾ ಖಜಾಂಚಿ ವಕೀಲ ವಿ.ಜಯಪ್ಪ ಮಾತನಾಡಿ, ಅಮೋಘವರ್ಷ ನೃಪತುಂಗ ಹೇಳಿರುವಂತೆ ಕನ್ನಡ ನಾಡು ಇನ್ನೂ ವಿಸ್ತಾರವಾಗಿದ್ದು, ಭಾಷೆ, ಸಂಸತಿ ಸಂರಕ್ಷಣೆ ಬಗ್ಗೆ ರ್ನಿಲಕ್ಷ ವಹಿಸಿದ ಕಾರಣ ವಿಸ್ತಿರ್ಣ ಕಿರಿದಾಗಿದೆ ಎಂದು ತಿಳಿಸಿದರು.
ಗುಡಿಪಲ್ಲಿಯ ಎಲ್ಲ ಶಾಲಾ ವಿದ್ಯಾರ್ಥಿಗಳಿಂದ ರಾಜ್ಯೋತ್ಸವ ಅಂಗವಾಗಿ ಪೌರಾಣಿಕ ನಾಟಕ ಸೇರಿ ಸಾಂಸತಿಕ ಕಾರ್ಯಕ್ರಮ ಮಾಡಲಾಯಿತು.
ಸ.ಹಿ.ಪ್ರಾ.ಶಾಲೆ ಮುಖ್ಯಶಿಕ್ಷಕ ಎನ್​.ಚಂದ್ರ, ಸವೋರ್ದಯ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಎನ್​.ನಾಗರಾಜ ಮತ್ತು ಶಿಕ್ಷಕ ವೃಂದದಿಂದ ಧ್ವಜಾರೋಹಣ ಶ್ರೀ ರಾಜರಾಜೇಶ್ವರಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.
ಗ್ರಾಪಂ ಅಧ್ಯಕ್ಷ ರಮೇಶ್​, ಮಾಜಿ ಅಧ್ಯಕ್ಷ ಎ.ವಿ.ಸುಬ್ರಹ್ಮಣಿ ರೆಡ್ಡಿ, ಟಿ.ಜಿ.ಸುದರ್ಶನ್​, ಮಾಜಿ ಉಪಾಧ್ಯಕ್ಷ ವಿಶ್ವನಾಥಾಚಾರಿ, ಮುಖಂಡರಾದ ಎಸ್​.ಎಂ.ರಾಮಕೃಷ್ಣ, ಬೇವಹಳ್ಳಿ ನಾಗರಾಜ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net