ಸರ್ಕಾರದ ಸೌಲಭ್ಯ ಸದ್ಬಳಕೆಯಾಗಲಿ

ಚಿಕ್ಕನಾಯಕನಹಳ್ಳಿ Campaign ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾ ಸಮಾರಂಭವನ್ನು ಶಾಸಕ ಸಿ.ಬಿ.ಸುರೇಶ್​ಬಾಬು ಉದ್ಘಾಟಿಸಿದರು. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್​, ಬಿಇಒ ಕಾಂತರಾಜು, ಪುರಸಭೆ ಮಾಜಿ ಸದಸ್ಯ ಸುರೇಶ್​, ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಗವಿರಂಗಯ್ಯ ಇದ್ದರು.
ಚಿಕ್ಕನಾಯಕನಹಳ್ಳಿ Campaign ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾ ಸಮಾರಂಭವನ್ನು ಶಾಸಕ ಸಿ.ಬಿ.ಸುರೇಶ್​ಬಾಬು ಉದ್ಘಾಟಿಸಿದರು. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್​, ಬಿಇಒ ಕಾಂತರಾಜು, ಪುರಸಭೆ ಮಾಜಿ ಸದಸ್ಯ ಸುರೇಶ್​, ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಗವಿರಂಗಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಬಿ.ಸುರೇಶ್​ ಬಾಬು ಹೇಳಿಕೆ
  • ಜಾಬ್​ ಕಾರ್ಡ್​ ಅಭಿಯಾನಕ್ಕೆ ಚಾಲನೆ
ಚಿಕ್ಕನಾಯಕನಹಳ್ಳಿ: ಗ್ರಾಮೀಣರಿಗೆ ಸ್ಥಳಿಯವಾಗಿ ಉದ್ಯೋಗ ಕಲ್ಪಿಸುವ ವಿಬಿ-ಜಿ ರಾಮ್​ ಜಿ Campaign ಯೋಜನೆಯನ್ನು ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದು, ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ ಬಾಬು ತಿಳಿಸಿದರು.
ತಾಲೂಕಿನ ಹೊನ್ನೇಬಾಗಿ ಗ್ರಾಪಂ ವ್ಯಾಪ್ತಿಯ ಕಾಡೇನಹಳ್ಳಿಯ ಶನೈಶ್ಚರ ದೇವಾಲಯದ ಬಳಿ ಯೋಜನೆಗೆ ಸಂಬಂಧಿಸಿದ ಬೀದಿನಾಟಕ ಹಾಗೂ ಜಾಬ್​ ಕಾರ್ಡ್​ ಮೇಳಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಅರ್ಹರು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ತಾಪಂ ಇಒ ಶಿವರಾಜಯ್ಯ ಮಾತನಾಡಿ, ವಿಬಿ-ಜಿ ರಾಮ್​ ಜಿ ಯೋಜನೆಯಡಿ ವಾರ್ಷಿಕ ಉದ್ಯೋಗದ ಅವಧಿಯನ್ನು 100 ದಿನಗಳಿಂದ 125 ದಿನಗಳಿಗೆ ಹಾಗೂ ದಿನದ ಕೂಲಿ ಮೊತ್ತವನ್ನೂ 370ರಿಂದ 382 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದರು. 
ಸಹಾಯಕ ನಿರ್ದೇಶಕ ಇಂದ್ರೇಶ್​ ಮಾತನಾಡಿ, ಉದ್ಯೋಗ ಚೀಟಿ ಹೊಂದಿಲ್ಲದ ಅರ್ಹ ಗ್ರಾಮೀಣ ಕುಟುಂಬಗಳಿಗೆ ಸ್ಥಳದಲ್ಲೇ ಪರಿಶೀಲಿಸಿ ಹೊಸ ಜಾಬ್​ ಕಾರ್ಡ್​ ನೀಡಲಾಗುವುದು. ಅರ್ಹ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಪಂಗೆ ಭೇಟಿ ನೀಡಿ ಆಧಾರ್​ ಕಾರ್ಡ್​, ಬ್ಯಾಂಕ್​ ಪಾಸ್​ ಬುಕ್​, ಪಡಿತರ ಚೀಟಿ ಸಲ್ಲಿಸಿ ಹೊಸದಾಗಿ ಉದ್ಯೋಗ ಚೀಟಿ ಪಡೆಯಬಹುದು ಎಂದು ತಿಳಿಸಿದರು. 
ತುಮಕೂರಿನ ನುರಿತ ಕಲಾವಿದರ ತಂಡವನ್ನು ಕರೆಸಿ ಯೋಜನೆಯ ಸಂಪೂರ್ಣ ಮಾಹಿತಿಯನ್ನೊಳ್ಳಗೊಂಡ ಜಾಗೃತಿ ಗೀತೆಗಳು ಹಾಗೂ ನಾಟಕ ಪ್ರದರ್ಶನ ಮಾಡಲಾಯಿತು. 
ಅಂಗನವಾಡಿ ಮಕ್ಕಳ ಕಾಳಜಿವಹಿಸಿ
ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಶಾಸಕರು, ಅಪೌಷ್ಟಿಕತೆಯಿಂದ ಇರುವಂತಹ ಮಕ್ಕಳಗ ಬಗ್ಗೆ ಎಚ್ಚರಿಕೆ ವಹಿಸಿ, ಗರ್ಭಿಣಿ, ಬಾಣಂತಿಯರ, ಅಂಗನವಾಡಿಗೆ ಬರುವಂತಹ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊನ್ನಪ್ಪ ಮಾತನಾಡಿ, ತಾಲೂಕಿನಲ್ಲಿ ಒಟ್ಟು 774 ಮಂಜೂರಾದ ಹುದ್ದೆಗಳಿದ್ದು, ಇದರಲ್ಲಿ 735 ಹುದ್ದೆ ಭರ್ತಿಯಾಗಿದೆ. 39 ಖಾಲಿ ಇವೆ. ತಾಲೂಕಿನಲ್ಲಿ ಒಟ್ಟು 387 ಅಂಗನವಾಡಿಗಳಿದ್ದು, 297 ಕೇಂದ್ರಕ್ಕೆ ಸ್ವಂತ ಕಟ್ಟಡವಿದೆ. 2 ಗ್ರಾಪಂ ಕಟ್ಟಡದಲ್ಲಿ, 9 ಸಮುದಾಯ ಭವನದಲ್ಲಿ, 19 ಶಾಲಾ ಕಟ್ಟಡಗಳಲ್ಲಿ, 15 ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, 45 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂಬ ಮಾಹಿತಿ ನೀಡಿದರು. ಅಂಗನವಾಡಿ ಮೇಲ್ವಿಚಾರಕರಾದ ಲಕ್ಷ$್ಮಮ್ಮ, ಶಾರದಮ್ಮ, ಲಿಲಾಭಾಯಿ, ರಮ್ಯಾ, ಸೌಮ್ಯಾ, ರೇಖಾ, ಇಲಾಖೆಯ ಸುನೀಲ್​, ಸಂತೋಷ್​ ಇದ್ದರು.
ಕ್ರೀಡಾಂಗಣ ಅಭಿವೃದ್ಧಿಗೆ 4 ಕೋಟಿ ರೂ.
ಪಟ್ಟಣ ತಾಲೂಕು ಕ್ರೀಡಾಂಗಣದಲ್ಲಿ ದೇಶೀಯ ವಿದ್ಯಾಪಿಠ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್​ ಬಾಬು, -ತಾಲೂಕಿನ ಕ್ರೀಡಾ ಪಟುಗಳಿಗಾಗಿ ತಾಲಿಮು ಕೊಠಡಿ. ಒಳಾಂಗಣ ಕ್ರೀಡಾಂಗಣ, ಸಿಂಥೆಟಿಕ್​ ಟ್ರಾಕ್​ ಸೇರಿ ಮೂಲ ಸೌಲಭ್ಯಗಳನ್ನೊಳಗೊಂಡ ಕ್ರೀಡಾಂಗಣ ಅಭಿವೃದ್ಧಿಗೆ 4 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದರು. ತಹಸೀಲ್ದಾರ್​ ಮಮತಾ ಮಾತನಾಡಿ, ಮೊಬೈಲ್​ನಿಂದಾಗಿ ಮಕ್ಕಳು ಆಟದ ಕಡೆ ಗಮನ ನೀಡುತ್ತಿಲ್ಲ. ಶಿಕ್ಷಣದೊಂದಿಗೆ ಕ್ರೀಡೆಗೂ ಒತ್ತು ನೀಡಿ ಎಂದರು. ವಿದ್ಯಾಸಂಸ್ಥೆಯ ನಿರ್ದೇಶಕ ಗಂಗಾಧರ್​, ನಿವೃತ್ತ ಮುಖ್ಯಶಿಕ್ಷಕ ನಂದೀಶ್​ಬಟ್ಲೇರಿ, ದೇಶೀಯ ವಿದ್ಯಾಪಿಠ ಶಾಲೆಯ ಮುಖ್ಯ ಶಿಕ್ಷಕ ಅರುಣ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net