ಹೆಣ್ಣುಮಕ್ಕಳಲ್ಲಿ ಆರೋಗ್ಯ ಅರಿವು ಇರಲಿ / HOSAKOTE

ಹೊಸಕೋಟೆ ತಾಲೂಕು ದೊಡ್ಡ ಹುಲ್ಲೂರು ಶಾಲೆಯಲ್ಲಿ ಗೋದ್ರೆಜ್​ ಫುಡ್ಸ್​ ಕಂಪನಿ ಹಾಗೂ ಸ್ಕೊಡ್​ ವೆಸ್​ ಕಂಪನಿ ಸಹಯೋಗದಲ್ಲಿ ಮಹಿಳೆಯರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಹೊಸಕೋಟೆ ತಾಲೂಕು ದೊಡ್ಡ ಹುಲ್ಲೂರು ಶಾಲೆಯಲ್ಲಿ ಗೋದ್ರೆಜ್​ ಫುಡ್ಸ್​ ಕಂಪನಿ ಹಾಗೂ ಸ್ಕೊಡ್​ ವೆಸ್​ ಕಂಪನಿ ಸಹಯೋಗದಲ್ಲಿ ಮಹಿಳೆಯರಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
Published on
ಹೊಸಕೋಟೆ : ಗ್ರಾಮೀಣ ಭಾಗದಲ್ಲಿ ಕಿಶೋರಿಯರು ಹಾಗೂ ಮಹಿಳೆಯರಲ್ಲಿ ಆರೋಗ್ಯ ಅರಿವು ಮೂಡಿಸುವ ಹಾಗೂ ಪೌಷ್ಟಿಕತೆ ಮಹತ್ವ ಸಾರುವ ನಿಟ್ಟಿನಲ್ಲಿ ಸ್ಕೊಡ್​ ವೆಸ್​ ಸಂಸ್ಥೆಯು ಗೋದ್ರೆಜ್​ ಫುಡ್ಸ್​ ಕಂಪನಿಯ ಸಿಎಸ್​ಆರ್​ ಅನುದಾನವನ್ನು ಬಳಕೆ ಮಾಡುತ್ತಿದೆ ಎಂದು ಸಂಸ್ಥೆಯ ವವಸ್ಥಾಪಕ ಅರುಣ್​ ಪ್ರಸಾತ್​ ಜಯಕುಮಾರ್​ ತಿಳಿಸಿದರು.
ತಾಲೂಕಿನ ದೊಡ್ಡಹುಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸ್ಕೊಡ್​ ವೆಸ್​ ಸಂಸ್ಥೆಯ ಜೀವನಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಕಿಶೋರಿಯರು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಅಭಿಯಾನ ಆರಂಭಿಸಲಾಗಿದೆ. ಕಳೆದ ತಿಂಗಳಿನಲ್ಲಿ ಅನಿಮಿಯಾ ಪರೀೆ ಮಾಡಲಾಗಿದ್ದು, 50 ಕಿಶೋರಿಯರಲ್ಲಿ ರಕ್ತಹಿನತೆ ಕಂಡುಬಂದಿದೆ. ಅವರೆಲ್ಲರಿಗೂ ಪೌಷ್ಟಿಕ ಆಹಾರದ ಕಿಟ್​ಗಳನ್ನು ನೀಡಲಾಗಿದೆ. ಇದರೊಂದಿಗೆ ಅಂಗನವಾಡಿ ಹಾಗೂ ಮಕ್ಕಳಿಗೆ ಅಗತ್ಯವಾಗಿರುವ ಬೋಧನಾ ಮತ್ತು ಶಿಕ್ಷಣ ಸಾಮಗ್ರಿ ವಿತರಿಸಿ, ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಾಗುತ್ತಿದೆ ಎಂದರು.
ಎಸ್​ಎಫ್​ಸಿಎಸ್​ ನಿರ್ದೇಶಕ ಹುಲ್ಲೂರು ರಾಜಗೋಪಾಲ್​ ಮಾತನಾಡಿ, ಗ್ರಾಮೀಣ ಶಾಲೆಗಳ ಶಿಕ್ಷಣ ಹಾಗೂ ಆರೋಗ್ಯ ಸುಧಾರಣೆಗೆ ಖಾಸಗಿ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಸಿಎಸ್​ಆರ್​ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ಈ ೇತ್ರಗಳಿಗೆ ಮೀಸಲಿಟ್ಟಿರುವುದು ಉತ್ತಮಬೆಳವಣಿಗೆ. ದೊಡ್ಡ ಹುಲ್ಲೂರು ಭಾಗದಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಭಾರತದದ ಅಸಂಖ್ಯಾತರು ಹೆಚ್ಚಾಗಿದ್ದಾರೆ. ಅವರಲ್ಲೂ ಸಹ ಸಮರ್ಪಕ ಆರೋಗ್ಯ ಕಾಯ್ದಿರಿಸಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಸ್ಕೊಡ್​ ವೆಸ್​ ಕಾರ್ಖಾನೆಯ ವ್ಯವಸ್ಥಾಪಕ ಅರುಣ್​ ಪ್ರಸಾದ್​, ವಿಭಾಗದ ಮುಖ್ಯಸ್ಥ ಡಾ.ಎಚ್​.ಆರ್​.ನಾರಾಯಣ ಹೆಗಡೆ, ಗೋದ್ರೆಜ್​ ಫುಡ್ಸ್​ ಲಿಮಿಟೆಡ್​ ಸಂಪನ್ಮೂಲ ವ್ಯಕ್ತಿ ಲಲಿತಾ ನಾಯಕ್​, ಮುಖ್ಯಸ್ಥರಾದ ನವೀನ್​, ಮಂಜುನಾಥ್​, ಮುಖ್ಯಶಿಕ್ಷಕರಾದ ಮಹೇಶ್​, ವಿಜಯಲಕ್ಷಿ$್ಮ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net