ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಬದ್ಧರಾಗಲಿ

Let everyone be committed to environmental protection.
Let everyone be committed to environmental protection.
Published on

ಗೌರಿಬಿದನೂರು:

ಗಿಡ&ಮರಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಪ್ರಧಾನ ಸಿವಿಲ್​ ನ್ಯಾಯಾಧೀಶ ಗಣೇಶ್​ ಕರೆ ನೀಡಿದರು.

ತಾಲೂಕಿನ ಮುದುಗಾನಕುಂಟೆ ಶ್ರೀೇತ್ರದ ಆವರಣದಲ್ಲಿ ಶ್ರೀಸತ್ಯ ಸಾಯಿ ಸೇವಾ ಟ್ರಸ್ಟ್​ ಹಾಗೂ ಇನ್ನಿತರ ಸಂ&ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನ ದುರಾಸೆಯಿಂದಾಗಿ ಗಿಡ&ಮರಗಳು ನಾಶವಾಗಿ ಪರಿಸರ ಸಮತೋಲನವನ್ನು ಕಳೆದುಕೊಂಡ ಕಾರಣ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಇದರಿಂದಾಗಿ ಕೊಳವೆ ಬಾವಿಗಳು ಬತ್ತಿ ವ್ಯವಸಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಜತೆಗೆ ಕುಡಿಯುವ ನೀರಿನ ಹಾಹಾಕಾರವನ್ನು ಎದುರಿಸುತ್ತಿದ್ದೇವೆ. ಪ್ರತಿಯೊಬ್ಬರೂ ಸಾಮಾಜಿಕ ಕಾಳಜಿಯಿಂದ ಸಂ&ಸಂಸ್ಥೆಗಳ ಜತೆ ಕೈಜೋಡಿಸಿ ಸಸಿಗಳನ್ನು ನೆಡುವ ಮೂಲಕ ಪರಿಸರವನ್ನು ಸ್ವಯಂ ಪ್ರೇರಿತರಾಗಿ ರಸಬೇಕು ಎಂದರು.
ವಕೀಲ ಸಂದ ಅಧ್ಯಕ್ಷ ದಿನೇಶ್​ ಕುಮಾರ್​ ಮಾತನಾಡಿ, ಪರಿಸರ ರಕ್ಷಣೆಗಾಗಿ ಗಿಡಗಳನ್ನು ನೆಡುವುದು, ಅವುಗಳನ್ನು ಸಂರಸಿ ಹೆಮ್ಮರವಾಗುವಂತೆ ಮಾಡಿ. ಪ್ಲಾಸ್ಟಿಕ್​ ಬಳಕೆಯನ್ನು ನಿಯಂತ್ರಿಸುವ ಮೂಲಕ ಪರಿಸರ ಮಾಲಿನ್ಯವಾಗದಂತೆ ಕ್ರಮವಹಿಸಿ, ಪುನರ್​ ಬಳಸಬಹುದಾದ ಪ್ಲಾಸ್ಟಿಕ್​ ಬಳಕೆಗೆ ಆದ್ಯತೆ ನೀಡಿ ಎಂದರು.
ಮುದುಗಾನಕುಂಟೆ ೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ಈಗಾಗಲೆ ಗೌರಿಬಿದನೂರು ಸೇವಾ ಪ್ರತಿಷ್ಠಾನದಿಂದ ಮುದುಗಾನಕುಂಟೆ ೇತ್ರದ ಕೆರೆಯ ಹೂಳನ್ನು ಹೊರತೆಗೆಯಲಾಗುತ್ತಿದೆ. 4 ವರ್ಷಗಳ ಹಿಂದೆಯೇ ಕೆರೆ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಮುದುಗಾನಕುಂಟೆ ೇತ್ರವನ್ನು ಸಸ್ಯ ಕಾಶಿಯನ್ನಾಗಿ ಮಾಡುವ ಕಾರ್ಯ ಪ್ರಾರಂಭಿಸಿದ್ದೇವೆ. ನಮ್ಮ ಕಾರ್ಯದ ಜತೆ ಕೈಜೋಡಿಸಿ ಶ್ರೀೇತ್ರದಲ್ಲಿ ಪರಿಸರ ಸಂರಕ್ಷಣೆಗೆ ಸಂ&ಸಂಸ್ಥೆಗಳು ಮುಂದೆ ಬರುತ್ತಿರುವುದು ಶ್ಲಾನೀಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net