ಶೈಕ್ಷಣಿಕ ಪ್ರಗತಿ ಮನೆಯಿಂದ ಆರಂಭವಾಗಲಿ

 ಪಟ್ಟಣದ ಲಯನ್ಸ್ ಶಾಲೆ ಆವರಣದಲ್ಲಿರುವ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಶನಿವಾರ ಲಯನ್ಸ್ ವಿದ್ಯಾಸಂಸ್ಥೆ ವಾರ್ಷಿ ಕೋತ್ಸವ ಸಿಂಹನಾದ-2025 ಸಮಾರಂಭ ಆಯೋಜಿಸಲಾಗಿತ್ತು. ಪ್ರೊ. ಮೈಸೂರು ಕೃಷ್ಣಮೂರ್ತಿ, ಎಂ.ಮಂಜುಳಾ, ಎಸ್.ನಾಗರಾಜು ಕೊಂಗರಹಳ್ಳಿ, ಎ.ಡಿ.ಕುಮಾರ ಕೃಷ್ಣ ಇತರರು ಇದ್ದರು.
ಪಟ್ಟಣದ ಲಯನ್ಸ್ ಶಾಲೆ ಆವರಣದಲ್ಲಿರುವ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಶನಿವಾರ ಲಯನ್ಸ್ ವಿದ್ಯಾಸಂಸ್ಥೆ ವಾರ್ಷಿ ಕೋತ್ಸವ ಸಿಂಹನಾದ-2025 ಸಮಾರಂಭ ಆಯೋಜಿಸಲಾಗಿತ್ತು. ಪ್ರೊ. ಮೈಸೂರು ಕೃಷ್ಣಮೂರ್ತಿ, ಎಂ.ಮಂಜುಳಾ, ಎಸ್.ನಾಗರಾಜು ಕೊಂಗರಹಳ್ಳಿ, ಎ.ಡಿ.ಕುಮಾರ ಕೃಷ್ಣ ಇತರರು ಇದ್ದರು.
Published on
ಕೊಳ್ಳೇಗಾಲ: ಮಕ್ಕಳ ಶಿಕ್ಷಣದ ಹಿಂದಿರುವ ಪಾಲಕರ ಪರಿಶ್ರಮವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಹೇಳಿದರು.

ಪಟ್ಟಣದ ಲಯನ್ಸ್ ಶಾಲೆ ಆವರಣದಲ್ಲಿರುವ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಲಯನ್ಸ್ ವಿದ್ಯಾಸಂಸ್ಥೆ ವಾರ್ಷಿಕೋತ್ಸವ ಸಿಂಹನಾದ-2025 ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಶಾಲೆಯಲ್ಲಿ ಏರ್ಪಡಿಸಿದ್ದ ಪಾಠ-ಪ್ರವಚನಗಳ ಬಗ್ಗೆ ಪಾಲಕರು ಚರ್ಚಿಸಬೇಕು. ಶಿಕ್ಷಣ ಪ್ರಮುಖ್ಯತೆ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಪರೀಕ್ಷೆಗಳು ಹತ್ತಿರವಾಗುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿ ಮನೆಯಿಂದಲೇ ಆರಂಭವಾಗಬೇಕು. ಈ ಸಾಲಿನ ಪರೀಕ್ಷೆ ಉತ್ತಮ ಫಲಿತಾಂಶಕ್ಕೆ ಎಲ್ಲ ಶಾಲೆಗಳು ಶ್ರಮಿಸಬೇಕು ಎಂದ ಹೇಳಿದರು.
ಕಳೆದ 48 ವರ್ಷಗಳಿಂದ ಲಯನ್ಸ್ ಶಿಕ್ಷಣ ಸಂಸ್ಥೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿದ್ದಾರೆ ಎಂದರು.

ನಿವೃತ್ತ ಪ್ರೊ.ಮೈಸೂರು ಕೃಷ್ಣಮೂರ್ತಿ ಮಾತನಾಡಿ, ಪಾಲಕರು ಮಕ್ಕಳ ಮನಸ್ಸಿನಲ್ಲಿರುವ ಆಸೆಯ ಕ್ಷೇತ್ರವನ್ನು ಅರಿಯಬೇಕು. ತಂದೆ- ತಾಯಿ ಹೇಳಿದ್ದೇನೆ ಮಾಡಬೇಕು ಎಂಬ ಗರ್ವದ ಮಾತನ್ನು ಹಾಡಬಾರದು. ಇದರಿಂದ ಮಕ್ಕಳ ಮನಸ್ಸಲ್ಲಿ ತಿರಸ್ಕಾರ ಮನೋಭಾವನೆ ಬೆಳೆಯು=ತ್ತದೆ. ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆ ಅಡಗಿದ್ದು ಪಾಲಕರು ಅದನ್ನು ತಿಳಿಯಬೇಕು ಎಂದರು.
ಲಯನ್ಸ್ ವಿದ್ಯಾಸಂಸ್ಥೆ ನಿರ್ದೇಶಕ ಹಾಗೂ ಆರ್ಯ ವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ ಮಾತನಾಡಿ, ವಾರ್ಷಿ ಕೋತ್ಸವ ಕಾರ್ಯಕ್ರಮ ವಿದ್ಯಾ ಸಂಸ್ಥೆಯ ಮೌಲ್ಯ, ಶಿಸ್ತು, ಪರಿಶ್ರಮದ ಸಂಕೇತವಾಗಿದೆ. ಈ ವೇದಿಕೆಯಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸುವ ವೇದಿಕೆಯಾಗಿರುತ್ತದೆ. ಲಯನ್ಸ್ ವಿದ್ಯಾಸಂಸ್ಥೆ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು.

ಈ ವೇಳೆ ಲಯನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿನುತಾ, ಲಯನ್ಸ್ ಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ಅವರು ವಾರ್ಷಿಕ ವರದಿ ಮಂಡಿಸಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಲಯನ್ಸ್ ಶಾಲೆ ಮತ್ತು ಕಾಲೇಜು ವಿದ್ಯಾ ರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಮಾದೇಶ್, ಲಯನ್ಸ್ ವಿದ್ಯಾ ಸಂಸ್ಥೆ ಖಜಾಂಚಿ ನಾಗರಾಜು ಕೊಂಗರಹಳ್ಳಿ, ಕಾರ್ಯದರ್ಶಿ ವೆಂಕಟೇಶ್, ಜಂಟಿ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ, ಮಂಜುನಾಥ್, ನಿರ್ದೇಶಕರಾದ ಜಿ.ಎಸ್.ಮಹದೇವ ಪ್ರಸಾದ್, ಎ.ಡಿ.ಕುಮಾರಕೃಷ್ಣ, ಚನ್ನಮಾದೇಗೌಡ, ಎ.ಟಿ.ವಿಶ್ವನಾಥ್, ಆರ್.ವೆಂಕಟೇಶ್ ಬಾಬು, ಕೆ.ಸಿ.ರಾಮಯ್ಯ, ಒ.ವಿ.ಸತೀಶ್, ಲಯನ್ಸ್ ಕಾಲೇಜಿನ ಪ್ರಾಂಶುಪಾಲೆ ವಿನುತಾ, ಲಯನ್ಸ್ ಶಾಲೆ ಮುಖ್ಯಶಿಕ್ಷಕ ಶ್ರೀಕಾಂತ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net