ಪಾವಗಡ:ಸೋಲಾರ್ ಸಿಎಸ್ಆರ್ ನಿಧಿಯಿಂದ ಆಂಬುಲೆನ್ಸ್ ನೀಡುತ್ತಿರುವುದು ಉತ್ತಮ ಸೇವೆಯಾಗಿದೆ ಎಂದು ಆಂಧ್ರದ ಟಿಡಿಪಿ ಪಕ್ಷದ ಧರ್ಮಾವರಂ ಇಂಚಾರ್ಜ್ ಪರಿಟಾಲ ಶ್ರೀರಾಮ್ ತಿಳಿಸಿದರು.
ಆಯನ ರಿನಿವಬಲ್ ಪವರ್ ಸೋಲಾರ್ ಕಂಪನಿಯು ಸಿಎಎಸ್ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ್ದ ಉಚಿತ ಆಂಬುಲೆನ್ಸ್ ವಾಹನವನ್ನು ವೆಂಕಟನಹಳ್ಳಿಯಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಆಂಧ್ರ ಗಡಿ ಹಂಚಿಕೊಂಡಿರುವ ವಳ್ಳೂರು ಮತ್ತು ತಿರುಮಣಿ ಗ್ರಾಮ ಪಂಚಾಯಿತಿ ಸಾರ್ವಜನಿಕರು ಪಟ್ಟಣದಿಂದ 30 ಕಿಮೀ ದೂರದಲ್ಲಿದ್ದು. ಅನಾರೋಗ್ಯದ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆಯ ಅಗತ್ಯ ಪರಿಗಣಿಸಿ ವಾಹನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸದ್ಬಳಕೆಯಾಗಲಿ ಎಂದು ಅಭಿಪ್ರಾಯಪಟ್ಟರು.
ಅಯನ ರಿನೆವೆಬಲ್ ಪವರ್ ತಾಲೂಕು ಮುಖ್ಯಸ್ಥ ತಾಲ್ಲೂರಿ ಅನಿಲ್ ಮಾತನಾಡಿ, ಸಂಸ್ಥೆಯು ಸಾರ್ವಜನಿಕ ಸೇವೆಗೆಂದು ಸಿಎಸ್ಆರ್ ನಿಧಿ ಹಣದಲ್ಲಿ ಆಂಬುಲೆನ್ಸ್ ಸೇವೆಯನ್ನು ನೀಡಿದೆ. ಮುಂದಿನ ದಿನಗಳಲ್ಲಿ ಆಂಬುಲೆನ್ಸ್ ವಾಹನದಿಂದ ಇನ್ನಷ್ಟು ಜನರಿಗೆ ಅನುಕೂಲವಾಗಲಿ ಎಂದು ತಿಳಿಸಿದರು.
ಕಂಪನಿಯ ವೈಭವ್ ಕಠಾರಿಯಾ, ಗುತ್ತಿಗೆದಾರ ಶಂಕರ್ ರೆಡ್ಡಿ , ವೆಂಕಟಮ್ಮನಹಳ್ಳಿ ಮುಖಂಡ ಚೆನ್ನಕೇಶವ, ವಳ್ಳೂರು ರವಿ, ಅಶೋಕ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶೇಷಗಿರಿ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್, ಸದಸ್ಯ ರವಿ ಮತ್ತಿತರರು ಇದ್ದರು.