ಮಕ್ಕಳು ಉತ್ಸಾಹದಿಂದ ಓದಲಿ

ತೇರದಾಳ ಪಟ್ಟಣದ ಗುರುಕುಲ ಆವರಣದಲ್ಲಿರುವ ಶ್ರೀಜಿನ ಸೇನಾಚಾರ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜೆ.ವಿ. ಮಂಡಳದ ಪದವಿ ಹಾಗೂ ಪ.ಪೂ. ಕಾಲೇಜಿನ 2026-27ರ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಡಾ. ಜೆ.ಬಿ. ಆಲಗೂರ ಉದ್ಘಾಟಿಸಿದರು. ಶಿಕ್ಷಣ ತಜ್ಞ ಡಾ. ಸುರೇಶ ಕುಲಕರ್ಣಿ, ಟಿ.ಸಿ. ಪಡಸಲಗಿ, ಬಿ.ಎಸ್. ಸಾವಂತನವರ, ಡಿ.ಆರ್. ಪಾಟೀಲ, ಮಲ್ಲಿನಾಥ ಅಸ್ಕಿ, ಪದ್ಮರಾಜ ಹಟ್ಟಿ, ಕಿರಣ ಕುಳ್ಳಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ತಜ್ಞ ಡಾ. ಸುರೇಶ ಕುಲಕರ್ಣಿ ಹೇಳಿಕೆ
  • ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ
ತೇರದಾಳ: ಪಠ್ಯವಸ್ತು ಮಾತ್ರ ತಿಳಿದರೆ ಸಾಲದು, ಸಾಮಾನ್ಯ ಜ್ಞಾನದೊಂದಿಗೆ ತಮ್ಮ ಭಾವ ಬೆರೆಸಿ, ಸಂಸ್ಕೃತಿಯೊಂದಿಗೆ ನಾಡಿನ ಜ್ಞಾನ ಅರಿತುಕೊಂಡಿದ್ದರೆ ಹೆಚ್ಚಿನ ಅಂಕಗಳಿಸಿ ಸಾಧಕರಾಗುವುದು ಸುಲಭವಾಗುತ್ತದೆ ಶಿಕ್ಷಣ ತಜ್ಞ ಡಾ. ಸುರೇಶ ಕುಲಕರ್ಣಿ ಹೇಳಿದರು.
ಪಟ್ಟಣದ ಗುರುಕುಲ ಆವರಣದಲ್ಲಿರುವ ಶ್ರೀ ಜಿನಸೇನಾಚಾರ್ಯ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಹುಬಲಿ ವಿದ್ಯಾಪೀಠಾಂತರ್ಗತ ಜೆ.ವಿ. ಮಂಡಳದ ಪದವಿ ಹಾಗೂ ಪ.ಪೂ. ಕಾಲೇಜಿನ 2026-27ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪರಿಮಿತ ಉತ್ಸಾಹ ಹೊಂದಿದ ವಿದ್ಯಾರ್ಥಿಗಳೆಲ್ಲರು ವಿಶಾಲ ಮನೋಭಾವದಿಂದ ಓದಬೇಕು. ಜೀವನಕ್ಕೆ ಅಗತ್ಯವಿದ್ದ ವಿಷಯಗಳಿಗಿಂತ ಅನಗತ್ಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ಮತ್ತು ಸಮಯ ನೀಡುವುದರಿಂದ ಸಾಧಕರಾಗುವಲ್ಲಿ ವಿಲರಾಗಬಹುದು. ಕಷ್ಟಪಡದೆ ಇಷ್ಟಪಟ್ಟು, ಉತ್ಸಾಹದಿಂದ ಶಿಕ್ಷಕರ ಮಾರ್ಗದರ್ಶನದಂತೆ ಅಧ್ಯಯನ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸಂಸ್ಥೆ ಕಾರ್ಯದರ್ಶಿ ಡಾ. ಜೆ.ಬಿ.ಆಲಗೂರ ಉದ್ಘಾಟಿಸಿದರು. ಜೆವಿ ಮಂಡಳದ ಅಧ್ಯಕ್ಷ ಟಿ.ಸಿ. ಪಡಸಲಗಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಬಿ.ಎಸ್. ಸಾವಂತನವರ, ಡಿ.ಆರ್.ಪಾಟೀಲ, ಮಲ್ಲಿನಾಥ ಅಸ್ಕಿ, ಪದ್ಮರಾಜ ಹಟ್ಟಿ, ಕಿರಣ ಕುಳ್ಳಿ, ಪಿ.ಎಂ. ಹೊಸೂರೆ, ಪಿ.ಡಿ. ಬದನಿಕಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net