ಬಾಗೇಪಲ್ಲಿ ತಾಲೂಕಿನ ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಂಸತಿಕ ಕಾರ್ಯಕ್ರಮಗಳಲ್ಲಿ ಎಸ್ಡಿಎಂಸಿ ಅಧ್ಯಕ್ಷ ಶಂಕರಪ್ಪ, ಬಿಆರ್ಪಿ ಮಂಜುನಾಥ, ಶ್ರೀರಾಮ ಇದ್ದರು.
ಪಾತಪಾಳ್ಯ: ಮಕ್ಕಳ ಅಭಿವೃದ್ಧಿಗೆ ಸಾಂಸತಿಕ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಎಸ್ಡಿಎಂಸಿ ಅಧ್ಯಕ್ಷ ಶಂಕರಪ್ಪ ತಿಳಿಸಿದರು.
ಶಿವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಂಸತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಯುಗಕ್ಕೆ ಮಾರು ಹೋಗುತ್ತಿರುವ ಯುವ ಜನತೆಗೆ ಐತಿಹಾಸಿಕ ವಿಚಾರಗಳನ್ನು ತಿಳಿಸಬೇಕಾಗಿದೆ. ಪಠ್ಯದಲ್ಲಿ ಸಾಮಾಜಿಕವಾದ ಎಲ್ಲ ವಿಚಾರಗಳನ್ನು ಏಕಕಾಲದಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಕಲೆಗಳ ಮುಖೇನ ತಿಳಿಸಲು ಸಾಧ್ಯವಿದೆ ಎಂದರು.
ಬಿಆರ್ಪಿ ಮಂಜುನಾಥ ಮಾತನಾಡಿ, ಮನುಷ್ಯನ ಜೀವನಕ್ಕೆ ಆಹಾರದಂತೆ ಚೈತನ್ಯ ತುಂಬಲು ಕಲೆ ಮುಖ್ಯ. ಆದ್ದರಿಂದ ಮುಂದಿನ ತಲೆಮಾರಿಗೆ ಜನಪದ ಕಲೆ ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಸಿಆರ್ಪಿ ಶ್ರೀರಾಮ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆ ಹೊರತೆಗೆಯಲು ಇಂಥ ಕಾರ್ಯಕ್ರಮಗಳ ಅಗತ್ಯವಿದೆ. ಪಾಲಕರು ಸಹಕಾರ ನೀಡಬೇಕು ಎಂದರು. ಮುಖ್ಯಶಿಕ್ಷಕ ಲ್ಮಪತಿ, ಶಿಕ್ಷಕರಾದ ಅನಂತಮೂರ್ತಿ, ವೆಂಕಟರವಣ, ಶಂಷಿಯಾಬಾನು ಇದ್ದರು.