ಮಕ್ಕಳು ವಿಷಯ ಜ್ಞಾನ ಬೆಳೆಸಿಕೊಳ್ಳಲಿ / TUBAGARE

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಕೋಟೆ ಕ್ರಾಸ್​ ಬಳಿಯ ಎಸ್​ಜೆಸಿಆರ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಾತಾ, ಪಿತೃ ವಂದನಾ ಕಾರ್ಯಕ್ರಮದಲ್ಲಿ ತಾಲೂಕು ಮಹಿಳಾ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಡಾ.ನವೀನ್​ ಕುಮಾರ್​, ಶಾಲೆ ಮುಖ್ಯ ಶಿಕ್ಷಕ ವಿಜಯ್​ ಕುಮಾರ್​, ಶಿಕ್ಷಕರು, ಪಾಲಕರು ಇತರರಿದ್ದರು.

Published on
ತೂಬಗೆರೆ : ವಿದ್ಯಾರ್ಥಿಗಳಿಗೆ ಸಾಧನೆ ಮಾಡುವ ಛಲ ಇರಬೇಕು ಎಂದು ದೊಡ್ಡಬಳ್ಳಾಪುರ ತಾಲೂಕು ಮಹಿಳಾ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಡಾ. ನವೀನ್​ ಕುಮಾರ್​ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಕೋಟೆ ಕ್ರಾಸ್​ ಬಳಿಯ ಎಸ್​ಜೆಸಿಆರ್​ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮಾತಾ&ಪಿತೃ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೆಟ್ಟ ದಾರಿ ಆಯ್ಕೆ ಮಾಡಿಕೊಳ್ಳದೆ ವಿಷಯ ಜ್ಞಾನ ಬೆಳೆಸಿಕೊಂಡು ಸಾಧನೆ ಸಾಗಬೇಕು ಎಂದರು.
ಡಾ.ಎನ್​. ಶಿವರಾಮರೆಡ್ಡಿ ಮಾತನಾಡಿ, ಪಾಲಕರು ಮಕ್ಕಳಲ್ಲಿ ಅದಿ ಹರೆಯದ ವಯಸ್ಸಿನಲ್ಲಿ ಉಂಟಾಗುವ ಬದಲಾವಣೆ ಅರ್ಥ ಮಾಡಿಕೊಂಡು ಮಗುವನ್ನು ಜೋಪಾನ ಮಾಡಿದಂತೆ ನೋಡಿಕೊಳ್ಳಬೇಕು. ಹಾಗೆಯೇ ವಿದ್ಯಾರ್ಥಿಗಳು ಕೇವಲ ಸ್ವಹಿತಾಸಕ್ತಿ ಕೆಲಸಗಳಿಗೆ ಮಹತ್ವ ನೀಡದೆ ಉತ್ತಮ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶ್ರೀ ಮಂಗಳನಾಥ ಸ್ವಾಮೀಜಿ ಮಾತನಾಡಿ, ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಗುರು ಹಿರಿಯರ ನೆರವು ಬೇಕಾಗಿದೆ. ಜತೆಗೆ ಉತ್ತಮ ನಡತೆ ಸಂಸ್ಕಾರಗಳು ಅಗತ್ಯ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net