ಮಕ್ಕಳು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಲಿ learning

ಮಕ್ಕಳು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಲಿ learning
ಮಕ್ಕಳು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಲಿ learning
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಹೇಳಿಕೆ
ಬೂದಿಕೋಟೆ: ಜೀವನದಲ್ಲಿ ನಾನು ಸಾಧಿಸಲು ಆಗುವುದಿಲ್ಲ ಎನ್ನುವ ವಸ್ತು ಯಾವುದು ಇಲ್ಲ. ಕಲೆತರೆ ಪ್ರತಿಯೊಂದು ಕೆಲಸವು ಸಾಧ್ಯ ಹಾಗೂ ಸುಲಭ ಹಾಗಾಗಿ ಪ್ರತಿಯೊಬ್ಬರೂ ಕಲಿಕೆಗೆ ಹೆಚ್ಚು ಆಸಕ್ತಿ ತೋರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಹೇಳಿದರು.learning
ಹೋಬಳಿಯ ಗುಲ್ಲಹಳ್ಳಿ ಕ್ಲಸ್ಟರ್​ ವ್ಯಾಪ್ತಿಗೆ ಒಳಪಡುವ ಶಾಲೆಗಳಿಂದ ಹಮ್ಮಿಕೊಂಡಿದ್ದ ಕಲಿಕಾ ಹಬ್ಬದಲ್ಲಿ ಮಾತನಾಡಿಮ, ಮಕ್ಕಳು ಮನಸಲ್ಲಿ ನಾನು ಕಲಿಯುತ್ತೇನೆ ಎಂಬ ದೃಢಸಂಕಲ್ಪ ಮಾಡಬೇಕು. ಆಗ ಮಾತ್ರ ಏನು ಬೇಕಾದರೂ ಕಲಿಯಬಹುದು, ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ನಮ್ಮ ಮಕ್ಕಳನ್ನು ನೋಡಿಕೊಳ್ಳುವ ರೀತಿ ಶಾಲೆಯಲ್ಲಿನ ಮಕ್ಕಳನ್ನು ನಾವು ನೋಡಿಕೊಳ್ಳಬೇಕು. ಪ್ರತಿಯೊಬ್ಬ ಮಗುವಿಗೂ ಕಲಿಕೆ ಬಗ್ಗೆ ಆಸಕ್ತಿ ತುಂಬುವಂತಾಗಬೇಕು ಎಂದರು.
ಜಿಲ್ಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅಪ್ಪಯ್ಯೇಗೌಡ ಮಾತನಾಡಿ, ಕಲಿಕೆ ಹಬ್ಬ ಅಂದರೆ ನಮ್ಮ ಶಾಲೆಗಳಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲ ಮಕ್ಕಳು ಎಲ್ಲ ವಿಷಯದಲ್ಲೂ ಮಂದಿರಬೇಕು ಎಂದರು.
ಎಸ್ಸಿ, ಎಸ್ಟಿ ನೌಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಸಾಕ್ಷರತಾ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್​, ಜಿಪಿಟಿಸಿ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್​, ಸಿಆರ್​ಪಿ ರಾಜಪ್ಪ, ಗುಲ್ಲಹಳ್ಳಿ ಶಾಲೆ ಮುಖ್ಯೋಪಾಧ್ಯಾಯ ವೆಂಕಟೇಶಪ್ಪ, ದಿನ್ನೂರು ಶಾಲೆ ಮುಖ್ಯ ಶಿಕ್ಷಕ ವೆಂಕಟಪ್ಪ, ಮೂತನೂರು ಶಾಲೆ ಮುಖ್ಯ ಶಿಕ್ಷಕ ಎಂ.ನಾಗರಾಜ್​, ಶಿಕ್ಷಕರಗಳಾದ ಶ್ರೀನಿವಾಸ್​, ವಾಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net