ಜೇವೂರ ಗ್ರಾಮದ ಹಠ ಯೋಗಿ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದ ಆರಣದಲ್ಲಿ ಪಂಚಾಕ್ಷರಿ ಸಾಂಸ್ಕೃತಿಕ ನಾಟ್ಯ ಸಂಘ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಡಚಣ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲೆ, ಸಂಸ್ಕೃತಿಯನ್ನು ಜಾನಪದ ಕಲಾವಿದರು ಹಾಗೂ ಕಲಾಭಿಮಾನಿಗಳು ಮುಂದಿನ ಜನಾಂಗಕ್ಕೆ ತಿಳಿಸುವ ಸಲುವಾಗಿ ಉಳಿಸಿ ಬೆಳೆಸಿಕೊಂಡು ಬರಬೇಕಾದ ಅಗತ್ಯತೆಯಿದೆ ಎಂದು ಹೇಳಿದರು. ವೇದಮೂರ್ತಿ ಶಿವಯ್ಯ, ಶಾಂತಾಬಾಯಿ ಮೇಲಿನಮನಿ, ಶಿವಾನಂದ ಬಿರಾದಾರ, ಶರಣಪ್ಪ ಹತ್ತಿ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜಗೌಡ ಪಾಟೀಲ, ಶ್ರೀಶೈಲ ಬಿರಾದಾರ, ಸೋಮನಾಥ ತೇಲಿ, ಮಲ್ಲಿಕಾರ್ಜುನ ವಿಭೂತಿ, ಭೀಮರಾಯ ಕಟ್ಟಿಮನಿ, ರಮೇಶ ಬಡದಾಳ, ಶಿವಯ್ಯಸ್ವಾಮಿ ಮಠಪತಿ, ಪ್ರಭು ಭಜಂತ್ರಿ ಇತರರಿದ್ದರು.