ಕೃಷಿ ಸಂಬಂಧಿ ವಿಚಾರ ಸಂಕಿರಣಗಳು, ಪ್ರಾತ್ಯಕ್ಷಿಕೆ, ಆವಿಷ್ಕಾರಿ ಉತ್ಪನ್ನಗಳ ಪ್ರದರ್ಶನ, ತಜ್ಞರ ಜತೆ ಸಮಾಲೋಚನೆ- ಇವೆಲ್ಲ ನಡೆಯುವುದರಿಂದಾಗಿ ಇಂಥ ಮೇಳಗಳು ಮಾಹಿತಿ ವಿನಿಮಯಕ್ಕೂ ವೇದಿಕೆಯಾಗುತ್ತವೆ. ರೈತರು-ಗ್ರಾಹಕರ ಮುಖಾಮುಖಿ ಭೇಟಿಗೂ ಅವಕಾಶವಾಗುತ್ತದೆ. ಇವತ್ತಿನ ದಿನಮಾನದಲ್ಲಿ ಉತ್ಪಾದನೆ ವೆಚ್ಚ ಹೆಚ್ಚಳ, ಕೃಷಿ ಕಾರ್ವಿುಕರ ಕೊರತೆ, ಹವಾಮಾನ ವೈಪರೀತ್ಯದಿಂದಾಗುವ ನಷ್ಟ ಇತ್ಯಾದಿ ಕಾರಣದಿಂದ ಎಷ್ಟೋ ಜನರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಹೀಗಿರುವಾಗ, ಕೃಷಿಯಲ್ಲಿ ನವೀನ ವಿಧಾನಗಳು ಮತ್ತು ತಂತ್ರಜ್ಞಾನ ಬಳಕೆ ಅನಿವಾರ್ಯ.