ರಾಜಕಾರಣಿಯ ಮನೆ, ಮನಸ್ಸು ಮುಕ್ತವಾಗಿರಲಿ

ತಿಪಟೂರಿನ ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಡೇನೂರು ಕಾಂತರಾಜು, ಎಸ್.ಕೆ. ಜಗನ್ನಾಥ್, ಸುದರ್ಶನ್, ವಿಶ್ವೇಶ್ವರ ಬದರಗಡೆ, ಜಲಜಾಕ್ಷಮ್ಮ, ಕೆಂಪರಾಜ ಅರಸ್, ತರಕಾರಿ ನಾಗರಾಜು, ಉಪನ್ಯಾಸಕ ರೇಣುಕಯ್ಯ, ಗೋವಿಂದರಾಜು ಇತರರು ಇದ್ದರು.
ತಿಪಟೂರಿನ ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಡೇನೂರು ಕಾಂತರಾಜು, ಎಸ್.ಕೆ. ಜಗನ್ನಾಥ್, ಸುದರ್ಶನ್, ವಿಶ್ವೇಶ್ವರ ಬದರಗಡೆ, ಜಲಜಾಕ್ಷಮ್ಮ, ಕೆಂಪರಾಜ ಅರಸ್, ತರಕಾರಿ ನಾಗರಾಜು, ಉಪನ್ಯಾಸಕ ರೇಣುಕಯ್ಯ, ಗೋವಿಂದರಾಜು ಇತರರು ಇದ್ದರು.
Published on

ತಿಪಟೂರು :

ರಾಜಕಾರಣಿಯ ಮನೆ ಮತ್ತು ಮನಸ್ಸು ಸದಾ ಮುಕ್ತವಾಗಿರಬೇಕು. ನಾನೆಂದಿಗೂ ಶೋಷಿತರು, ಹಿಂದಿಳಿದ ವರ್ಗದವರು ಮತ್ತು ತುಳಿತಕ್ಕೊಳಗಾದವರ ಪರ, ಸವಾಜದಲ್ಲಿ ಯಾರೂ ಕೂಡಾ ಅವಕಾಶ ವಂಚಿತರಾಗಬಾರದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.

ನಗರದ ದೇವರಾಜ ಅರಸು ಭವನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿ, ತಾಲೂಕಿನಾದ್ಯಂತ 12 ವಸತಿ ಶಾಲೆ ನಿರ್ಮಿಸಲಾಗಿದ್ದು, ಇನ್ನೂ ಮೂರು ವಸತಿ ಶಾಲೆ ನಿರ್ಮಿಸಲಾಗುವುದು.

ನನ್ನ ಅಧಿಕಾರಾವಧಿಯಲ್ಲಿ ಯಾರಿಗೂ ತಾರತಮ್ಯ ವಾಡಿಲ್ಲ. ಕೆಲವರು ಟೀಕೆ ವಾಡುವುದನ್ನೇ ಅಭ್ಯಾಸ ವಾಡಿಕೊಂಡಿದ್ದಾರೆ. ತಾಲೂಕಿನ ಜನತೆಯ ಕಷ್ಟಕ್ಕೆ ನೆರವಾಗುವುದು, ಗ್ರಾಮೀಣ ಭಾಗದಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು ನನ್ನ ಕರ್ತವ್ಯ ಎಂದರು.

ಉಪನ್ಯಾಸಕ ರೇಣುಕಯ್ಯ ಮಾತನಾಡಿ, ಮೇಲ್ವರ್ಗದವರಿಂದ ತುಳಿತಕ್ಕೆ ಒಳಗಾಗಿ ಬಾಯಿದ್ದರೂ ಮೂಕರಾಗಿ, ಬುದ್ದಿಯಿದ್ದರೂ ಬುದ್ದಿಹೀನರಾಗಿ ಶೋಷಿತ ವರ್ಗದಿಂದ ತುಳಿತಕ್ಕೊಳಗಾದ ದೀನ ದಲಿತರ, ದುರ್ಬಲ ವರ್ಗದವರ ದನಿಯಾಗಿದ್ದ ಏಕ ವಾತ್ರ ದೀಮಂತ ದೇವರಾಜ ಅರಸು ಎಂದು ತಿಳಿಸಿದರು.

ನಗರಾಯುಕ್ತ ವಿಶ್ವೇಶ್ವರ ಬದರಗಡೆ ವಾತನಾಡಿ, ಶ್ರೀಮಂತ ಕುಟುಂಬದಿಂದ ಬಂದರೂ, ಶೋಷಿತರ ಧನಿಯಾದ ಏಕೈಕ ನಾಯಕ ದೇವರಾಜ ಅರಸು, ಹಾವನೂರು ಆಯೋಗ ರಚನೆ, ಉಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ತಂದ ಧೀಮಂತ ವ್ಯಕ್ತಿ ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಡೇನೂರು ಕಾಂತರಾಜು ವಾತನಾಡಿದರು. ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮಡೇನೂರು ಕಾಂತರಾಜು, ತಹಸೀಲ್ದಾರ್ ಎಸ್.ಕೆ. ಜಗನ್ನಾಥ್, ಇಒ ಎಚ್.ಎಂ. ಸುದರ್ಶನ್, ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ಕಚೇರಿಯ ಕೆಂಪರಾಜ ಅರಸ್, ತರಕಾರಿ ನಾಗರಾಜು, ಉಪನ್ಯಾಸಕ ರೇಣುಕಯ್ಯ, ಪ್ರಾಂಶುಪಾಲ ಎಂ.ಡಿ. ಶಿವಕುವಾರ್, ಗೋವಿಂದರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net