ಹುಳಿಮಾವು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

ಹುಳಿಮಾವು ಗ್ರಾಮದಲ್ಲಿ ಮೂರು ವರ್ಷದ ಚಿರತೆ ಕಾಣಿಸಿಕೊಂಡಿರುವುದು.
ಹುಳಿಮಾವು ಗ್ರಾಮದಲ್ಲಿ ಮೂರು ವರ್ಷದ ಚಿರತೆ ಕಾಣಿಸಿಕೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಹುಳಿಮಾವು ಗ್ರಾಮದ ಮಧ್ಯ ಭಾಗ
  • ಸೋಮವಾರ ಮುಂಜಾನೆ 4.30 ಸಮಯದಲ್ಲಿ ಚಿರತೆ
ನಂಜನಗೂಡು: ತಾಲೂಕಿನ ಹುಳಿಮಾವು ಗ್ರಾಮದ ಮಧ್ಯ ಭಾಗದಲ್ಲಿ ಸೋಮವಾರ ಮುಂಜಾನೆ 4.30 ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಗ್ರಾಮದ ಲಿಂಗಾಯತರ ಬೀದಿ ನಿವಾಸಿ ದಿವ್ಯಾಂಗ ಯೋಗೇಂದ್ರ ಅವರು ಮುಂಜಾನೆ 4.30 ಸುಮಾರಿಗೆ, ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರ ಬಂದ ಸಂದರ್ಭದಲ್ಲಿ ಮನೆ ಮುಂಭಾಗ ಚಿರತೆ ಕಂಡು ಗಾಬರಿಯಾಗಿದ್ದಾರೆ. ಕೂಡಲೇ ಮನೆಯೊಳಗೆ ಬಂದು ಕಿಟಕಿಯಿಂದ ಚಿರತೆಯ ಚಿತ್ರ ಸೆರೆ ಹಿಡಿದಿದ್ದಾರೆ.
ಇನ್ನು ಅದೇ ಬೀದಿಯ ನಿವಾಸಿ ಲೋಕೇಶ್ ಅವರ ಕಬ್ಬಿನ ಗದ್ದೆಯಲ್ಲಿ 2 ದಿನಗಳಿಂದ ಚಿರತೆ ಸಂವರಿಸಿರುವ ಕುರುಹುಗಳು ಕೂಡ ದೊರೆತಿದೆ. ರೈತ ಲೋಕೇಶ್ ಚಿರತೆ ಕಂಡು ಭಯಭೀತರಾಗಿದ್ದಾರೆ. ಅಲ್ಲದೆ ಅದೇ ಗ್ರಾಮದಲ್ಲಿ 4 ದಿನಗಳ ಹಿಂದೆ ಮಾದಪ್ಪ ಅವರಿಗೆ ಸೇರಿದ ಕರು ಮೇಲೆ ದಾಳಿ ಮಾಡಿದ್ದು. ಅದೃಷ್ಟವಶಾತ್ ಕರು ಪ್ರಾಣಾಪಾಯದಿಂದ ಪಾರಾಗಿದೆ.
ಅರಣ್ಯ ಇಲಾಖೆಯ ರೋಹಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೂಡಲೇ ಕಬ್ಬಿನ ಗದ್ದೆಯಲ್ಲಿ ಬೋನು ಇಡುವುದಾಗಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net