ಆನೇಕಲ್: ಬನ್ನೇರುಟ್ಟ ಜೈವಿಕ ಉದ್ಯಾನವನದ ಸಫಾರಿ ವಾಹನದ ಮೇಲೆ ಚಿರತೆ ದಾಳಿ ಮಾಡಿದ್ದು, ಚೆನ್ನೆ$ ಮೂಲದ ವಹಿದಾ ಬಾನು(50) ಗಾಯಗೊಂಡಿದ್ದಾರೆ. ಪತಿ ಹಾಗೂ ಮಗನೊಂದಿಗೆ ಗುರುವಾರ ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿಗಳ ವೀಣೆಗಾಗಿ ವಹಿದಾ ಬಾನು ಆಗಮಿಸಿದ್ದರು. ಕೆ.ಎಸ್.ಟಿ.ಡಿ.ಸಿ. ವಾಹನದಲ್ಲಿ ಸಫಾರಿಗೆ ಹೋಗಿದ್ದಾಗ ಚಿರತೆ ವಾಹನದ ಮೇಲೆ ಎಗರಿ ಕಿಟಕಿ ಪಕ್ಕ ಕುಳಿತಿದ್ದ ಮಹಿಳೆಯ ಕೈಗೆ ಪರಚಿದೆ. ಅಲ್ಲದೆ ಕೈಯಲ್ಲಿದ್ದ ಬಟ್ಟೆಯನ್ನು ಕಿತ್ತುಕೊಂಡು ಹೋಗಿದೆ. ವಾಹನದಿಂದ ಕೆಳಗೆ ಇಳಿದ ಬಳಿಕವೂ ಕೆಲ ಹೊತ್ತು ಚಿರತೆ ಅಲ್ಲೆ ಇದ್ದು, ಬಸ್ನಲ್ಲಿದ್ದವರಿಗೆ ಭಯ ಹುಟ್ಟಿಸಿದೆ. ಸದ್ಯ ವಹಿದಾ ಬಾನು ಅವರಿಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.