ವಿಧಾನ ಪರಿಷತ್ ಚುನಾವಣೆ: ವಿಜೃಂಬಿಸಿದ ಅಡ್ಡಮತದಾನ ಕಾಂಗ್ರೆಸ್‌ಗೆ 5, ಬಿಜೆಪಿ 2 ಸ್ಥಾನ ಗೆಲುವು: ಜೆಡಿಎಸ್‌ಗೆ ಸೋಲು
DK SHIVAKUMAR
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ವಿನಯ್ ಕಾರ್ತಿಕ್ 32 ಮತ
ಬಿಜೆಪಿ ಅಭ್ಯರ್ಥಿಗಳಾದ ರಘು ಕೌಟಿಲ್ಯ 29 ಮತಗಳು ಹಾಗೂ ಲಿಂಗರಾಜ ಪಾಟೀಲ್ 27 ಮತ
ಬೆಂಗಳೂರು:
ಭಾರಿ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾರ್ಧನಿಸಿದೆ. ಆಡಳಿತರೂಢ ಕಾಂಗ್ರೆಸ್ ತನ್ನ ಐವರು ಅಭ್ಯರ್ಥಿಗಳನ್ನು ನಿರಾಯಸವಾಗಿ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ತನ್ನ ಪಾಲಿನ ಪೂರ್ಣ ಮತಗಳನ್ನು ಪಡೆಯಲು ವಿಲವಾಗಿದ್ದರೂ, ಕೊನೆಯಲ್ಲಿ ತಿಣುಕಾಡಿಕೊಂಡು ಗೆಲುವಿನ ನಗೆ ಬೀರಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಎಂಟು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಕಾಂಗ್ರೆಸ್‌ನ ಐದು, ಬಿಜೆಪಿ ಎರಡು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ ನೆರವಿನ ನಿರೀಕ್ಷೆ ಇಟ್ಟುಕೊಂಡು ಕಣಕ್ಕೆ ಇಳಿದಿದ್ದ ಜೆಡಿಎಸ್ 14 ಮತಕ್ಕೆ ಸೀಮಿತಗೊಂಡು ಸೋಲುಂಡಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ವಿನಯ್ ಕಾರ್ತಿಕ್ 32 ಮತಗಳನ್ನು ಪಡೆದು ಅತಿ ಹೆಚ್ಚು ಮೊದಲ ಪ್ರಾಶಸ್ತಯ ಮತಗಳನ್ನು ಗಳಿಸಿರುವುದು ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ
ಬಿ.ಕೆ. ಹರಿಪ್ರಸಾದ್, ಬಿ.ಎಸ್.ಶಿವಣ್ಣ ಹಾಗೂ ತಿಪ್ಪಣಪ್ಪ ಕಮಕನೂರ್ ತಲಾ 30 ಮತಗಳನ್ನು ಪಡೆದರೆ, ಪಿ.ವಿ. ಮೋಹನ್ 29 ಮತಗಳನ್ನು ಪಡೆದರು. ಅಚ್ಚರಿ ಅಂದರೆ, ಐವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಟ್ಟು 151 ಮತಗಳು ಲಭಿಸಿವೆ.
ಬಿಜೆಪಿ ಅಭ್ಯರ್ಥಿಗಳಾದ ರಘು ಕೌಟಿಲ್ಯ 29 ಮತಗಳು ಹಾಗೂ ಲಿಂಗರಾಜ ಪಾಟೀಲ್ 27 ಮತಗಳನ್ನು ಪಡೆದು ಒಟ್ಟು 56 ಮತಗಳನ್ನು ಗಳಿಸಿದರು.
ಜೆಡಿಎಸ್ ಅಭ್ಯರ್ಥಿ ಗೋವಿಂದರಾಜುಗೆ ತನ್ನ ಪಕ್ಷದಿಂದ ನಾಲ್ವರು ಶಾಸಕರು ಕೈಕೊಟ್ಟರು. ಹಾಗಾಗಿ 14 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆಯಲಷ್ಟೆ ಅವರು ಶಕ್ತರಾದರು.
ಮೊದಲ ಪ್ರಾಶಸ್ತ್ಯ ಮತಗಳ ವಿವರ:
ವಿನಯ್ ಕಾರ್ತಿಕ್ (ಕಾಂಗ್ರೆಸ್) 32
ಬಿ.ಕೆ. ಹರಿಪ್ರಸಾದ್ (ಕಾಂಗ್ರೆಸ್) 30
ಬಿ.ಎಸ್. ಶಿವಣ್ಣ (ಕಾಂಗ್ರೆಸ್) 30
ತಿಪ್ಪಣಪ್ಪ ಕಮಕನೂರ್ (ಕಾಂಗ್ರೆಸ್) 30
ಪಿ.ವಿ. ಮೋಹನ್ (ಕಾಂಗ್ರೆಸ್) 29
ರಘು ಕೌಟಿಲ್ಯ (ಬಿಜೆಪಿ) 29
ಲಿಂಗರಾಜ ಪಾಟೀಲ್ (ಬಿಜೆಪಿ) 27
ಗೋವಿಂದರಾಜು (ಜೆಡಿಎಸ್) 14
ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಎಲ್ಲ ಅಭ್ಯರ್ಥಿಗಳು ಅಗತ್ಯ ಕೋಟಾ ಲೆಕ್ಕಾಚಾರದ ಆಧಾರದ ಮೇಲೆ ಆಯ್ಕೆಯಾಗಿರುವುದರಿಂದ ಚುನಾವಣಾ ಫಲಿತಾಂಶ ಸ್ಪಷ್ಟಗೊಂಡಿದೆ
--
ಒಂದಷ್ಟು ವಿಶೇಷಗಳು:
ಕಾಂಗ್ರೆಸ್ ಸಂಪೂರ್ಣ ಮೇಲುಗೈ:
ವಿಧಾನಸಭೆಯ ಸಂಖ್ಯಾಬಲವನ್ನು ಸಮರ್ಥವಾಗಿ ಬಳಸಿಕೊಂಡ ಕಾಂಗ್ರೆಸ್ ತನ್ನ ಎಲ್ಲಾ ಐದು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಯಿತು. ಮೇಲ್ಮನೆಯಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯುವಲ್ಲಿ ಧೃಢ ಹೆಜ್ಜೆ ಇಟ್ಟಿದೆ.
ವಿನಯ್ ಕಾರ್ತಿಕ್ ಅತಿ ಹೆಚ್ಚು ಮತ:
ಕಾಂಗ್ರೆಸ್‌ನ 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿನಯ್ ಕಾರ್ತಿಕ್ 32 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಅತಿ ಹೆಚ್ಚು ಮತ ಗಳಿಸಿದ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಇದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಕ್ಕ ದಿಗ್ವಿಜಯವಾಗಿದೆ.
ಕಾಂಗ್ರೆಸ್‌ನಲ್ಲಿ ಸಮಾನ ಹಂಚಿಕೆ:
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿ.ಎಸ್. ಶಿವಣ್ಣ ಹಾಗೂ ತಿಪ್ಪಣಪ್ಪ ಕಮಕನೂರ್ ತಲಾ 30 ಮತಗಳನ್ನು ಪಡೆದು ಪಕ್ಷದ ಮತ ನಿರ್ವಹಣೆ ಯಶಸ್ವಿಯಾಗಿದೆ ಎಂಬುದನ್ನು ತೋರಿಸಿವೆ.
ಬಿಜೆಪಿಯ ಅಭ್ಯರ್ಥಿಗಳ ಗೆಲುವು:
ರಘು ಕೌಟಿಲ್ಯ (29) ಹಾಗೂ ಲಿಂಗರಾಜ ಪಾಟೀಲ್ (27) ಇಬ್ಬರೂ ಗೆಲುವು ಸಾಧಿಸುವ ಮೂಲಕ ಬಿಜೆಪಿ ತನ್ನ ನಿರೀಕ್ಷಿತ ಫಲಿತಾಂಶವನ್ನು ಪಡೆದುಕೊಂಡಿದೆ.
ಜೆಡಿಎಸ್ ಅಭ್ಯರ್ಥಿಗೆ ಸೋಲು:
ಸಂಖ್ಯಾ ಬಲದ ಕೊರತೆ ಅನುಭವಿಸುತ್ತಿದ್ದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಆ ಪಕ್ಷದ ಮತಗಳೇ ಪೂರ್ಣ ಬರಲಿಲ್ಲ. ಇತ್ತ ಬಿಜೆಪಿ ಮತವೂ ಸಿಗಲಿಲ್ಲ. ಕೊನೆಗೆ 14 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಅಡ್ಡಮತದ ಚರ್ಚೆ:
*ಕಾಂಗ್ರೆಸ್‌ನಿಂದ ವಿನಯ್ ಕಾರ್ತಿಕ್ ಹಾಗೂ ಪಿ.ವಿ. ಮೋಹನ್, ಬಿಜೆಪಿಯ ರಘು ಮತ್ತು ಲಿಂಗರಾಜ ಪಾಟೀಲ ಅವರುಗಳು ಹೊಸದಾಗಿ ವಿಧಾನ ಪರಿಷತ್ ಪ್ರವೇಶಿಸುವ ಅವಕಾಶ ಪಡೆದಿದ್ದಾರೆ.
ಚುನಾವಣೆಯಲ್ಲಿ ಪ್ರಮುಖ ಅಡ್ಡಮತದಾನ ಭರ್ಜರಿಯಾಗಿಯೇ ನಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಶಾಸಕರ ಮತಗಳನ್ನು ಉಳಿಸಿಕೊಳ್ಳುವಲ್ಲಿ ಎಡವಿದ್ದರೆ, ಕಾಂಗ್ರೆಸ್ ಒಗ್ಗಟ್ಟು ಕಾಪಾಡಿಕೊಂಡು ಹೆಚ್ಚುವರಿ ಮತಗಳನ್ನು ಪಡೆದಿದೆ.