ಬೆಂಗಳೂರು: ಲೆಜೆಂಡ್ಸ್ ಪ್ರೊ T20 ಲೀಗ್ ತನ್ನ ಮೊದಲ ಸೀಸನ್‌ನಲ್ಲಿ ಕ್ರಿಸ್ ಗೇಲ್, ಜಾಕ್ವೆಸ್ ಕಾಲಿಸ್, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು ಮತ್ತು ಸ್ಟುವರ್ಟ್ ಬಿನ್ನಿ ಸೇರಿದಂತೆ ಹಲವು ಕ್ರಿಕೆಟ್ ತಾರೆಯಾರನ್ನು ಒಂದುಗೂಡಿಸುತ್ತಿದೆ. ವರ್ಷಗಳ ಕಾಲ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದವರು, ಪೈಪೋಟಿ ನಡೆಸಿದ್ದವರು, ಅನೇಕ ನೆನಪುಗಳನ್ನು ನಿರ್ಮಿಸಿದ್ದವರು ಈ ಬಾರಿ ಎಲ್ಲರೂ ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಳ್ಳುತ್ತಿದ್ದಾರೆ.