ವಿಶೇಷವಾಗಿ ಪಾಲಕರು, ಪೋಷಕರಿಂದಲೇ ನಡೆಯುವ ಬಲವಂತದ ಸಾವು ಅಥವಾ ಹತ್ಯೆಯಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಪ್ರಸ್ತಾವಿತ ಕಾಯ್ದೆಯು ಸಂತ್ರಸ್ತರಿಗೆ ರಕ್ಷಣೆ ನೀಡುವುದಲ್ಲದೆ, ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿಯೂ ಗಮನಹರಿಸಿದೆ. ಕಾಯ್ದೆಯ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ ಸುರಕ್ಷಿತ ಮನೆಗಳ ಸ್ಥಾಪನೆ, ವಿಶೇಷ ನ್ಯಾಯಾಲಯಗಳ ರಚನೆ, ಸಹಾಯವಾಣಿ ಮತ್ತು ಪ್ರತ್ಯೇಕ ಪೊಲೀಸ್ ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದೆ.