ಮಕ್ಕಳ ಸಂತೆಯಿಂದ ಸಾಮಾಜಿಕ ವೈಚಾರಿಕತೆ ಕಲಿಕೆ

Learning social skills through children's play
Learning social skills through children's play
Published on
ಚಿಕ್ಕನಾಯಕನಹಳ್ಳಿ: ಚೌಕಾಸಿ ಮಾಡಬೇಡಿ ಬೆಲೆ ರ್ನಿದಿಷ್ಟವಾಗಿದೆ. ಸಾವಯವದಲ್ಲಿ ಬೆಳೆದ ಸೊಪು$್ಪ ಇದು ಆರೋಗ್ಯಕ್ಕೆ ಒಳ್ಳೆಯದು ಈ ರೀತಿಯ ಮಾತುಗಳು ಕೇಳಿಬಂದಿದ್ದು ಹೊಸಪಾಳ್ಳಯದ ಶಾಲಾ ಆವರಣದಲ್ಲಿ.
ತಾಲೂಕಿನ ಶೆಟ್ಟಿಕೆರೆಯ ಕಲ್ಲುಬಾವಿಪಾಳ್ಯದ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಸಂತೆಯನ್ನು ಮಕ್ಕಳು ತಮ್ಮ ಜಮೀನುಗಳಲ್ಲಿ ಬೆಳೆದ ಸೊಪು$್ಪ, ತರಕಾರಿ, ಹಣ್ಣು ಸೇರಿದಂತೆ ಮೊಟ್ಟೆಯನ್ನು ಮಕ್ಕಳು ಸಂತೆಯಲ್ಲಿಟ್ಟು ಮಾರಾಟ ಮಾಡಿದರು. ಜತೆಗೆ ಪಾನಿಪುರಿಯು ಮಾರಾಟ ಹೆಚ್ಚಾಗಿದ್ದು, ಸೊಪ್ಪಿಗೆ ಬೇಡಿಕೆ ಇತ್ತು. ತಮ್ಮ ಮಕ್ಕಳ ಕೈಯಲ್ಲೇ ವ್ಯಾಪಾರ ಮಾಡಿ ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಂತಹ ಪಾಲಕರು ಮಕ್ಕಳೊಂದಿಗೆ ಖುಷಿ ಪಟ್ಟರು.
ಈ ವೇಳೆ ಎಸ್​ಡಿಎಂಸಿ ಅಧ್ಯಕ್ಷ ಸುಧಾಕರ್​ ಮಾತನಾಡಿ, ನಮ್ಮ ಶಾಲೆಯಲ್ಲಿ ಸಂತೆ ಮಾಡಿರುವುದು ಮಕ್ಕಳಲ್ಲಿ ವ್ಯಾಪಾರ, ಲೆಕ್ಕಚಾರ ಮತ್ತು ಮಾರುಕಟ್ಟೆಯ ಅರಿವು ಬೇಳೆಯಲಿ ಎಂಬ ಕಾರಣಕ್ಕೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಾಮಾಜಿಕ ವೈಚಾರಿಕತೆ ಜೀವನ ಶೈಲಿಯ ನೈಜ ಅನುಭವ ಆಗುತ್ತದೆ ಎಂದರು.ಶಾಲೆಯ ಎಸ್​ಡಿಎಂಸಿ ಉಪಾಧ್ಯಕ್ಷೆ ಸುಜಾತಾ, ಮಂಜುನಾಥ್​, ಮುಖ್ಯಶಿಕ್ಷಕ ರಮೇಶ್​, ಗ್ರಾಮಸ್ಥರಾದ ಸುನಿತಾ,ರೇಣುಕಯ್ಯ, ರಾಜಪ್ಪ, ನವೀನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net