ಕಲಿಕಾ ಹಬ್ಬ ವಿದ್ಯಾರ್ಜನೆಗೆ ಪೂರಕ

Learning festival supports learning
Learning festival supports learning
Published on
ಎಂ.ಎನ್​.ಕೋಟೆ: ಮಕ್ಕಳ ಕಲಿಕೆ ಆಸಕ್ತಿಯನ್ನು ಹೆಚ್ಚಿಸಿ, ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರಲು ಕಲಿಕಾಹಬ್ಬ ಸಹಕಾರಿಯಾಗಿದೆ ಎಂದು ಎಸ್​ಡಿಎಂಸಿ ಅಧ್ಯಕ್ಷ ಮುಕುಂದಪ್ಪ ತಿಳಿಸಿದರು.
ಗುಬ್ಬಿ ತಾಲೂಕಿನ ಬೊಡ ತಿಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಕಲಿಕೆಯ ಹಬ್ಬ ಒಂದು ವಿನೂತನ ಶೈಕ್ಷಣಿಕ ಕಾರ್ಯಕ್ರಮವಾಗಿದ್ದು, ಮಕ್ಕಳನ್ನು ಸಂತೋಷದಾಯಕ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆಗೆ ಪ್ರೇರೇಪಿಸುತ್ತದೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕು. ಪ್ರತಿ ತಿಂಗಳಿಗೊಮ್ಮೆ ಶಾಲೆಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಂಡು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಶಿಕ್ಷಕ ಗಿರೀಶ್​ ಮಾತನಾಡಿ, ಕಲಿಕಾಹಬ್ಬ ಮಕ್ಕಳಿಗೆ ಉತ್ತಮ ವೇದಿಕೆಯಾಗಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಕಲಿಕೆಗೆ ಸರ್ಕಾರ ಕೈಗೊಂಡಿರುವ ಕಲಿಕಾ ಹಬ್ಬ ಮಕ್ಕಳ ಭವಿಷ್ಯಕ್ಕೆ ಉತ್ತಮ ವೇದಿಕೆಯಾಗಿದೆ. ಇಡೀ ಜಗತ್ತಿನಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ಇದ್ದು, ಶಾಲಾ ಮಕ್ಕಳು ಪ್ರಾಥಮಿಕ ಹಂತದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟು ಸಮಾಜದಲ್ಲಿ ಒಳ್ಳೆಯ ಗೌರವವನ್ನು ಕಾಪಾಡಬೇಕು ಎಂದರು.
ಕಲಿಕಾ ಹಬ್ಬದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ಉಮೇಶ್​, ರಾಮಚಂದ್ರಪ್ಪ, ಸಿ.ಆರ್​.ಪಿ.ಮಂಜುನಾಥ್​, ಶಿಕ್ಷಕರಾದ ರಂಗಪ್ಪ , ಗಿರೀಶ್​, ಕಂಬದ ನರಸಿಂಹಯ್ಯ, ದಿಗ್ವಿಜಯ, ಮಂಜಣ್ಣ , ಎಸ್​ಡಿಎಂಸಿ ಸದಸ್ಯರಾದ ರಾಮಚಂದ್ರಯ್ಯ, ಲಕ್ಷ್ಮಣ್​, ಉಮೇಶ್​, ದೇವಮ್ಮ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net