ಬಾಗೇಪಲ್ಲಿ ತಾಲೂಕಿನ ಕುಂಟ್ಲಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಶ್ರೀದುರ್ಗಾ ಫೌಂಡೇಷನ್ನಿಂದ ವಿದ್ಯಾರ್ಥಿಗಳಿಗೆ ನಿಂಟು ವಿತರಿಸಲಾಯಿತು. ಅತಿಥಿ ಶಿಕ್ಷಕಿ ಸಾವಿತ್ರಿ, ಬಿ.ಎಸ್.ಮಧು, ಲ್ಮದೇವಿ, ಸಾವಿತ್ರಮ್ಮ ಇದ್ದರು.
ಪಾತಪಾಳ್ಯ: ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಮಕ್ಕಳು ಮಾತೃ ಭಾಷೆಯೊಂದಿಗೆ ಇಂಗ್ಲಿಷ್ ಕಲಿಯುವುದು ಅನಿವಾರ್ಯ ಎಂದು ಎಸ್ಡಿಎಂಸಿ ಅಧ್ಯೆ ರಾಧಮ್ಮ ತಿಳಿಸಿದರು.
ಕುಂಟ್ಲಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಬೆಂಗಳೂರಿನ ಶ್ರೀದುರ್ಗಾ ಫೌಂಡೇಷನ್ನಿಂದ ಕೊಡುಗೆಯಾಗಿ ನೀಡಿದ ನಿಂಟು ವಿತರಿಸಿ ಮಾತನಾಡಿದರು.
ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ವಿಶ್ವಾಸವಿಟ್ಟು ಕಲಿತರೆ ಅದು ಸುಲಭ. ಇಂಗ್ಲಿಷ್ ಕಲಿತರೆ ಕೀಳಿರಮೆ ಹೋಗುತ್ತದೆ. ವಿಶ್ವದ ಯಾವುದೇ ದೇಶದ ಜನರೊಡನೆ ವ್ಯವಹಾರ ಮಾಡಲು ಸಾಧ್ಯ ಎಂದರು.
ಅತಿಥಿ ಶಿಕ್ಷಕಿ ಸಾವಿತ್ರಿ ಮಾತನಾಡಿ, ಇಂಗ್ಲಿಷ್ ವ್ಯಾಕರಣದ ಬಳಕೆ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬಹುದು. ಸಣ್ಣ ಪುಟ್ಟ ಟಿಪ್ಪಣಿಗಳನ್ನು ಬರೆದುಕೊಂಡರೆ ಆಗಾಗ ಓದಿಕೊಳ್ಳಲು ಅನುಕೂಲವಾಗುತ್ತದೆ. ಹಾಗೆಯೇ ಹೊಸ ಶಬ್ದಗಳನ್ನು ಬರೆದುಕೊಂಡು ಅವುಗಳ ಅರ್ಥವನ್ನು ನಿಂಟಿನ ಸಹಾಯದಿಂದ ತಿಳಿದುಕೊಳ್ಳಬಹುದು ಎಂದರು.
ಅತಿಥಿ ಶಿಕ್ಷಕ ಬಿ.ಎಸ್.ಮಧು ಮಾತನಾಡಿ, ಸ್ಪರ್ಧಾತ್ಮಕ ಪರೀೆಯಲ್ಲಿ ಶಬ್ದ ಭಂಡಾರವಿದ್ದರೆ ಇಂಗ್ಲಿಷ್ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಬಹುದು. ನಿತ್ಯ ಒಂದು ಹೊಸ ಶಬ್ದ ಕಲಿಯುತ್ತ, ಅದನ್ನು ಬಳಸಬೇಕು ಎಂದರು.