ವಕೀಲರು ಕಾನೂನು ಆಶಯ ಈಡೇರಿಸಲಿ

ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ವೀರಯ್ಯಸ್ವಾಮಿ ಹಿರೇಮಠ ಮಾತನಾಡಿದರು. ಧನ್ಯಕುಮಾರ ಗುಂಡೆ, ಸಿ.ಎ್​.ಕುದರಿಮೋತಿ, ದಿಲೀಪ ವರ್ಣೆಕರ, ವಿ.ಜಿ. ಕಟದಾಳ, ಚಿತ್ರಾ ಗೌಂಡಲಕರ ಇತರರಿದ್ದರು.
ಬೈಲಹೊಂಗಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ವೀರಯ್ಯಸ್ವಾಮಿ ಹಿರೇಮಠ ಮಾತನಾಡಿದರು. ಧನ್ಯಕುಮಾರ ಗುಂಡೆ, ಸಿ.ಎ್​.ಕುದರಿಮೋತಿ, ದಿಲೀಪ ವರ್ಣೆಕರ, ವಿ.ಜಿ. ಕಟದಾಳ, ಚಿತ್ರಾ ಗೌಂಡಲಕರ ಇತರರಿದ್ದರು.
Published on

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವ ಸದುದ್ದೇಶದೊಂದಿಗೆ ಅಖಿಲ ಭಾರತೀಯ ಅ-ಧಿವಕ್ತ ಪರಿಷತ್ತು ನಿಸ್ವಾರ್ಥ ಭಾವದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಪರಿಷತ್​ ನಿಕಟಪೂರ್ವ ಅಧ್ಯಕ್ಷ ಧನ್ಯಕುಮಾರ ಗುಂಡೆ ಹೇಳಿದರು.

ಹೊಸೂರು ರಸ್ತೆಯ ಭಗಳಾಂಬಾದೇವಿ ಮಂಗಲ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಅ-ಧಿವಕ್ತ ಪರಿಷತ್ತು ಕರ್ನಾಟಕ ಉತ್ತರದ ಬೆಳಗಾವಿ ಟಕದ ಜಿಲ್ಲಾ ಪ್ರಶಿಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಕೀಲರು ತಾಲೂಕು ಮಟ್ಟಕ್ಕೆ ವೃತ್ತಿ ಸೀಮಿತಗೊಳಿಸದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ನ್ಯಾಯಾಂಗ ವಿಚಾರಗಳಲ್ಲೂ ತೊಡಗಿಸಿಕೊಳ್ಳಬೇಕು. ರಾಷ್ಟ್ರೀಯ ವಿಚಾರಧಾರೆಯೊಂದಿಗೆ ಕಾನೂನು ಆಶಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದರು.
ವೀರಯ್ಯಸ್ವಾಮಿ ಹಿರೇಮಠ, ಸಿ.ಎ್​.ಕುದರಿಮೋತಿ, ಸಾಮಾಜಿಕ ಕಾರ್ಯಕರ್ತ ದಿಲೀಪ ವರ್ಣೆಕರ, ಡಾ.ಪೂರ್ಣಿಮಾ ಗೌರೋಜಿ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಂ.ಲಕ್ಷಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಸಿ.ಎಂ.ಸಂಭೋಜಿ, ಸಿ.ಎಸ್​.ಚಿಕ್ಕನಗೌಡರ, ವಕೀಲರ ಸಂದ ಉಪಾಧ್ಯ ಎಸ್​.ವಿ.ಹಿರೇಮಠ, ಚಿತ್ರಾ ಗೌಂಡಲಕರ, ಸದಾಶಿವ ಹಿರೇಮಠ, ಎಸ್​.ವಿ.ಸಿದ್ಧಮನಿ, ಶಿವು ಬಡಿಗೇರ, ಎಸ್​.ವೈ.ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net