ದಿ.ಡಾ.ವೀರಬಸವಂತರಡ್ಡಿ ಶಿಸ್ತಿನ ಸಿಪಾಯಿ

ಯಾದಗಿರಿಯಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ್ ಅವರ ೨ನೇ ಪುಣ್ಯರ‍್ಮಣೆ ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಗ್ರಂಥ ಬಿಡುಗಡೆ ಮಾಡಿದರು. ಅಬ್ಬೆತುಮಕೂರು ಶ್ರೀ, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ ಇತರರಿದ್ದರು.
ಯಾದಗಿರಿಯಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ್ ಅವರ ೨ನೇ ಪುಣ್ಯರ‍್ಮಣೆ ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಗ್ರಂಥ ಬಿಡುಗಡೆ ಮಾಡಿದರು. ಅಬ್ಬೆತುಮಕೂರು ಶ್ರೀ, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ.ಪಾಟೀಲ್ ಬಣ್ಣನೆ
  • ಯಾದಗಿರಿಯಲ್ಲಿ ಎರಡನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಗ್ರಂಥ ಬಿಡುಗಡೆ
ಯಾದಗಿರಿ : ಮಾಜಿ ಶಾಸಕ ದಿ.ಡಾ.ವೀರಬಸವಂತರಡ್ಡಿ ಮುದ್ನಾಳ್ ಅವರು ಕಾಯಕ ನಿಷ್ಠೆ, ಶಿಸ್ತಿನ ಸಿಪಾಯಿ, ಬದ್ಧತೆಯ ಜೀವನ ನಡೆಸುವ ಮೂಲಕ ವೈದ್ಯಕೀಯ ವೃತ್ತಿ ಮತ್ತು ರಾಜಕೀಯದಲ್ಲೂ ಇತರರಿಗೆ ಮಾದರಿಯಾಗಿದ್ದರು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ವೀರಬಸವಂತರೆಡ್ಡಿ ಮುದ್ನಾಳ್ ಅವರ ೨ನೇ ಪುಣ್ಯಸ್ಮರಣೆ ಹಾಗೂ ಸಾಹಿತಿ ಡಾ.ಸುಭಾಷಚಂದ್ರ ಕೌಲಗಿ ಸಂಪಾದಕತ್ವದ ಗ್ರಂಥ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರದ ಬಿಎಲ್‌ಡಿ ಸಂಸ್ಥೆಯ ಮೆಡಿಕಲ್ ಕಾಲೇಜಿನಲ್ಲಿ ಸುಮಾರು ಎರಡು ದಶಕಗಳ ಕಾಲ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಂಸ್ಥೆ ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ.ಮುದ್ನಾಳ್ ಅವರು, ರಾಜಕೀಯಕ್ಕೆ ಬಂದು ಪಕ್ಷೇತರ ಶಾಸಕರಾಗಿ ಅನೇಕ ಜನಪರ ಕೆಲಸ ಮಾಡುವ ಮೂಲಕ ಜನಾನೂರಾಗಿಯಾಗಿದ್ದರು. ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿದ ವ್ಯಕ್ತಿ ಲಿಂಗೈಕ್ಯರಾದ ಮೇಲೂ ಜನಮಾನಸದಲ್ಲಿ ಉಳಿಯುತ್ತಾರೆ ಎಂಬುವುದಕ್ಕೆ ಇಂದು ಇಲ್ಲಿ ಸೇರಿದ ಅವರ ಅಬಿಮಾನಿಗಳೇ ಸಾಕ್ಷಿಯಾಗಿದ್ದು, ಅಲ್ಲದೆ ಅವರು, ನೇರ ನುಡಿ, ಹಾಸ್ಯ ಸ್ವಭಾವದ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.
ಬಿಎಲ್‌ಡಿ ಸಂಸ್ಥೆಯೊAದಿಗೆ ಉತ್ತಮ ಒಡನಾಟ ಹೊಂದಿದ್ದರಲ್ಲದೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಹೀಗಾಗಿ ನಾನು ಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಸಂಸ್ಥೆ ಅಧ್ಯಕ್ಷನಾಗಿ ಬಂದಿರುವೆ ಎಂದು ಹೇಳುವ ಮೂಲಕ ಡಾ.ವೀರಬಸವಂತರೆಡ್ಡಿ ಮುದ್ನಾಳ್ ಅವರ ವ್ಯಕ್ತಿತ್ವವಕ್ಕೆ ಮೆರಗು ನೀಡಿದರು.
ಶಾಸಕರಾದ ಶರಣಬಸಪ್ಪ ದರ್ಶನಾಪುರ, ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ ಮತ್ತು ಮಾಜಿ ಸಚಿವ ಅಮರೇಗೌಡ ಭಯ್ಯಾಪುರ ಮಾತನಾಡಿ, ಡಾ.ವೀರಬಸವಂತರಡ್ಡಿ ಅವರು ಜನಸಾಮಾನ್ಯರ ಶಾಸಕರಾಗಿದ್ದರು, ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತಿದ್ದರು. ವೈದ್ಯಕೀಯ ಸೇವೆಯಲ್ಲೂ ಅಪಾರ ಜ್ಞಾನ ಹೊಂದಿದ್ದರು. ಅನೇಕ ಬಡರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದರು. ಎಂತಹದ್ದೇ ರೋಗಕ್ಕೂ ಸರಳ ಚಿಕಿತ್ಸೆ ನೀಡುವ ಮೂಲಕ ಗುಣ ಮಾಡುತ್ತಿದ್ದರು ಎಂದರು.
ಸಾನ್ನಿಧ್ಯ ವಹಿಸಿದ್ದ ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಽಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಮಾತನಾಡಿ, ಡಾ.ಮುದ್ನಾಳ್ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ವೈದ್ಯಕೀಯ, ರಾಜಕೀಯ, ಸಾಮಾಜಿಕ ರಂಗದಲ್ಲೂ ಉದಾರ ಸೇವೆ ಸಲ್ಲಿಸುವ ಮೂಲಕ ಆ ಮನೆತನದ ಹೆಸರು ಮುಗಿಲೆತ್ತರಕ್ಕೆ ಬೆಳೆಸಿದ್ದಾರೆ ಎಂದು ಹೇಳಿದರು.
ಹೆಡಗಿಮದ್ರಿ ಶಾಂತಶಿವಯೋಗೀಶ್ವರ ಸಂಸ್ಥಾನ ಮಠದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದಾಸಬಾಳ ಮಠ ವೀರೇಶ್ವರ ಸ್ವಾಮೀಜಿ, ಗುರುಮಠಕಲ್‌ನ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮತ್ತು ದಂಡಗುAಡದ ಬಸವೇಶ್ವರ ಸಂಸ್ಥಾನ ಹಿರೇಮಠದ ಸಂಗನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.
ಬಸವ ಸಮಿತಿ ಉಪಾಧ್ಯಕ್ಷ ಹಣಮಂತರಡ್ಡಿ ಮುದ್ನಾಳ್, ಡಾ.ಸಂಗಮ್ಮ ವಿ.ಮುದ್ನಾಳ್. ಡಾ.ಅಮೋಘ ಸಿದ್ದೇಶ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್ ವೇದಿಕೆಯಲ್ಲಿ ಇದ್ದರು. ಭೀಮನಗೌಡ ಕ್ಯಾತನಾಳ, ಡಾ.ಬಸವರಾಜ ನರಸಣಗಿ, ಲಿಂಗಾರೆಡ್ಡಿ ಸಿದ್ದಪ್ಪ ಹೊಟ್ಟಿ, ಮಾರುತಿ ಕಲಾಲ, ಚನ್ನಪ್ಪಗೌಡ ಮೊಸಂಬಿ, ವಿಶ್ವನಾಥ ಸಿರವಾರ, ಮಹಾದೇವಪ್ಪ ಆರ್.ಅಬ್ಬೆತುಮಕೂರು, ಸುರೇಶ ರಾಠೋಡ,ಡಾ. ಕ್ಷೀತಿಜ್, ರಮೇಶ ದೊಡ್ಡಮನಿ,ಗುಂಡಪ್ಪ ಇಟಕಲ್, ಜಯಪ್ರಕಾಶರೆಡ್ಡಿ ನಾಲವಾರ, ಮಲ್ಲಣ್ಣಗೌಡ ಹಳಿಮನಿ ಕೌಳೂರು, ಸುಭಾಷಚಂದ್ರ ಕಟ್ಟಕಟೆ, ಮಲ್ಲಿಕಾರ್ಜುನ ಅರುಣಿ, ಮುದ್ನಾಳ್ ಕುಟುಂಬದ ಸದಸ್ಯರು, ಅಭಿಮಾನಿಗಳು ಭಾಗವಹಿಸಿದ್ದರು.
ಗ್ರಂಥ ಸಂಪಾದಕ ಡಾ.ಕೌಲಗಿ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಡಾ.ಸಿದ್ದರಾಜರೆಡ್ಡಿ ನಿರೂಪಿಸಿದರು, ವೀರಾರಡ್ಡಿ ಮುದ್ನಾಳ್ ಸ್ವಾಗತಿಸಿದರು. ಡಾ.ಶರಣಮ್ಮ ನರಸಣಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net