ಇದಲ್ಲದೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ಸೇರಿ ಕಂದಾಯ ಇಲಾಖೆಯ ಎಲ್ಲ ಸೇವೆಗಳ ಅರ್ಜಿಗಳನ್ನು ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಇದ್ದಲ್ಲಿಯೆ ಲ್ಯಾಪ್‌ಟಾಪ್ ಬಳಸಿಕೊಂಡು ಡಿಜಿಟಲ್ ಸಹಿ ಮೂಲಕ ವಿಲೇವಾರಿ ಮಾಡಬಹುದು. ಕಚೇರಿಗೆ ಬಂದೇ ಮಾಡಬೇಕು ಎಂಬ ನೆಪವನ್ನು ಇನ್ನು ಮುಂದೆ ಮಾಡುವಂತಿಲ್ಲ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.