ಶಾಲೆಯ ಹೊರಗೂ ಭಾಷೆಯ ಬೆಳವಣಿಗೆ ಅಗತ್ಯ kannada language

ಶಾಲೆಯ ಹೊರಗೂ ಭಾಷೆಯ ಬೆಳವಣಿಗೆ ಅಗತ್ಯ kannada language
ಶಾಲೆಯ ಹೊರಗೂ ಭಾಷೆಯ ಬೆಳವಣಿಗೆ ಅಗತ್ಯ kannada language
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್‌ಗೌಡ ಹೇಳಿಕೆ ಮೈಲಾಂಡಹಳ್ಳಿಯಲ್ಲಿ ರಾಜ್ಯೋತ್ಸವ
ಕದರೀಪುರ: ಗ್ರಾಮೀಣ ಭಾಗದಲ್ಲಿ ಕನ್ನಡ ಅಭಿಮಾನಿಗಳು ಸಿಗುವುದು ಅತಿ ವಿರಳ. ಈಗಿನ ವಿದ್ಯಾರ್ಥಿಗಳು ಕನ್ನಡ ಭಾಷೆ ಕೇವಲ ಶಾಲೆಯಲ್ಲಿದ್ದಾಗ ಕಲಿತದ್ದೆ ಹೆಚ್ಚು ಆದರೆ, ಶಾಲೆ ಬಿಟ್ಟ ನಂತರ ಗ್ರಾಮೀಣ ಮಕ್ಕಳು ಹೆಚ್ಚಾಗಿ ತೆಲುಗು ಭಾಷೆಯಲ್ಲಿ ಮಾತಾಡುವುದನ್ನು ರೂಡಿಯಲ್ಲಿ ಬಳಸುತ್ತಾರೆ. ಇದು ಬದಲಾಗಬೇಕಿದೆ ಎಂದು ನಿವೃತ್ತ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್‌ಗೌಡ ಹೇಳಿದರು. kannada language
ಕೋಲಾರ ತಾಲೂಕು ಮದ್ದೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಮಲ್ಲಾಂಡಹಳ್ಳಿಯಲ್ಲಿ ಭುವನೇಶ್ವರಿ ಕನ್ನಡ ಮಿತ್ರ ಬಳಗದಿಂದ ಮಂಗಳವಾರ ಆಯೋಜಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿದರು.
ಈಗಿನ ಪರಿಸ್ಥಿತಿಗೆ ತಕ್ಕ ಮಟ್ಟಿಗೆ ಎಂ. ಮಲ್ಲಾಂಡಹಳ್ಳಿಯಲ್ಲಿ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ರೀಡೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತೋಷಕರ ವಿಚಾರ
ನಾಡಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಯುವ ಪೀಳಿಗೆ ತಂದೆ ತಾಯಂದಿರಿಗೆ ಗೌರವ ಕೊಟ್ಟು ಅವರನ್ನ ಮುಪ್ಪಿನ ಕಾಲದಲ್ಲಿ ಅನಾಥರನ್ನಾಗಿಸದೆ ನೇರವಾಗಬೇಕು ಎಂದು ಕಿವಿಮಾತು ಹೇಳಿದರು.
ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ಕನ್ನಡ ಭಾಷೆಯ ಹುಟ್ಟು ಮತ್ತು ಅದರ ಶ್ರೇಷ್ಠತೆಯ ಕುರಿತು ಯುವ ಪೀಳಿಗೆಗೆ ಅರಿವು ನೀಡಿಬೇಕು. ಕನ್ನಡ ಆಚರಣೆಗಷ್ಟೇ ಸೀಮಿತವಾಗದಿರಲಿ, ಪ್ರತಿಯೊಬ್ಬರ ರಕ್ತದ ಕಣ ಕಣದಲ್ಲಿ ಇರಬೇಕಾಗಿದೆ ಸ್ವಭಾಷೆ ಪೂಜಿಸಬೇಕು. ಪರಭಾಷೆಯನ್ನು ಗೌರವಿಸಬೇಕೆ ವಿನಃ ಆರಾಧಿಸಬೇಕಿಲ್ಲ. ಕೇವಲ ತಿಳುವಳಿಕೆಗಷ್ಟೇ ಸೀಮಿತವಾಗಿರಲಿ. ಕರ್ನಾಟಕದಲ್ಲಿ ಅನ್ಯಭಾಷೆಯವರ ದರ್ಪ ಹೆಚ್ಚಾಗುತ್ತಿದ್ದು, ಹೊರ ರಾಜ್ಯಗಳಿಂದ ಜೀವನ ಸಾಗಿಸಲು ಕರ್ನಾಟಕಕ್ಕೆ ವಲಸೆ ಬಂದು ಕನ್ನಡಿಗರ ಮೇಲೆಯೇ ದರ್ಪ ಎಸಗುತ್ತಿರುವ ಪ್ರಕರಣ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಎಂ. ಎನ್. ಸುರೇಶ್, ರಾಘವೇಂದ್ರ, ರಾಮಚಂದ್ರಪ್ಪ, ಕಲಾವಿದ ಆರ್.ಬೈಚಪ್ಪ, ಟಿ.ಬಿ.ರಾಮಪ್ಪ, ಡಿ.ಮುನಿವೆಂಕಟಪ್ಪ, ಭುವನೇಶ್ವರಿ ಕನ್ನಡ ಮಿತ್ರ ಬಳಗ ಸದಸ್ಯರು ಇದ್ದರು.
ಹಬ್ಬದ ವಾತಾವರಣ: ಗ್ರಾಮದ ಪ್ರತಿ ಮನೆಯ ಮುಂದೆ ಮಹಿಳೆಯರು ರಂಗೋಲಿ ಬಿಡಿಸಿ ಕನ್ನಡ ಹಬ್ಬಕ್ಕೆ ಮೆರುಗು ತಂದು ಹಬ್ಬದ ವಾತಾವರಣ ಸೃಷ್ಟಿಸಿದರು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಯುವಕರಿಗೆ ವಾಲಿಬಾಲ್, ಓಟ ಸ್ಪರ್ಧೆ, ಹಗ್ಗ ಜಗ್ಗಾಟ, ಎಣ್ಣೆ ಕಂಬ, ಮಡಕೆ ಒಡೆಯುವುದು, ಇತ್ಯಾದಿ ಕ್ರೀಡೆ ಮತ್ತು ಮೋಜಿನ ಸ್ಪರ್ಧೆಗಳನ್ನು ಆಡಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net