ತೆರವು ಕಾರ್ಯಾಚರಣೆ ಕೌತುಕ : ಬೆಳ್ಳಂಬೆಳಗ್ಗೆ ನಗರದ ಬಿಇಒ ಕಚೇರಿ ಪಕ್ಕದ ವಿವಾದಿತ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ ಜೆಸಿಬಿ ಇಳಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಶಾಕ್ ಕೂತೂಹಲಕ್ಕೆ ಎಡೆಮಾಡಿತು. ಕಾರ್ಯಾಚರಣೆ ವೇಳೆ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿ, ಶಿಕ್ಷಣ ಇಲಾಖೆ ಅಧಿಕಾರಿ, ಸಿಬ್ಬಂದಿ ಜತೆಗೆ ಶಿಕ್ಷಕರ ಸಂಘಟನೆಗಳು ಸ್ಥಳದಲ್ಲಿ ಜಮಾಯಿಸಿದ್ದರಿಂದ, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿಮಾರ್ಣವಾಗಿತ್ತು.