ತೂಬಗೆರೆಯಲ್ಲಿ ಲ್ಮ ವೆಂಕಟೇಶ್ವರ ಸ್ವಾಮಿ ಜಾತ್ರೆ / TUBAGERE

ತೂಬಗೆರೆಯ ತೇರಿನ ಬೀದಿಯಲ್ಲಿ ಪ್ರಸನ್ನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.
ತೂಬಗೆರೆಯ ತೇರಿನ ಬೀದಿಯಲ್ಲಿ ಪ್ರಸನ್ನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನೆರವೇರಿತು.
Published on
ತೂಬಗೆರೆ : ತೂಬಗೆರೆಯ ತೇರಿನ ಬೀದಿಯಲ್ಲಿರುವ ಇತಿಹಾಸದ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ
ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 11.22 ಕ್ಕೆ ಅಭಿಜನ್​ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು.
ಬೆಂಗಳೂರು, ಚಿಕ್ಕಬಳ್ಳಾಪುರ, ತಮಿಳುನಾಡು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಸ್ವಾಮಿಯ ರಥಕ್ಕೆ ಹೂವು, ಹಣ್ಣು, ದವನ ಅರ್ಪಿಸಿ ಭಕ್ತಿ ಭಾವ ಮೆರೆದರು. ಬ್ರಹ್ಮರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಲ್ಮವೆಂಕಟೇಶ್ವರ ಸ್ವಾಮಿಗೆ ವಿಶೇಷವಾಗಿ ಅಭಿಷೇಕ, ಸುಪ್ರಭಾತ ಸೇವೆ, ದೇವರಿಗೆ ತೊಮಾಲೆ ಸೇವೆ, ನವಗ್ರಹ ಪೂಜೆ, ರಥದ ಮುಂಭಾಗದಲ್ಲಿ ಹೋಮ ನಡೆಸಲಾಯಿತು.
ವಿಶೇಷ ಪುಷ್ಪಗಳಿಂದ ಅಲಂಕರಿಸಿದ್ದ ಸ್ವಾಮಿಗೆ ಸುಮಂಗಲಿಯರಿಂದ ಭಕ್ತೀಗಿತೆ ಗಾಯನ, ಭಜನೆ, ಆಗಮಿಕರ ಮಂತ್ರ ಪಠಣೆ ಬಳಿಕ ಭಕ್ತರಜಯ ೂಷದೊಂದಿಗೆ ಬೆಳಗ್ಗೆ 11.22 ಕ್ಕೆ ಅಭಿಜನ್​ ಲಗ್ನದಲ್ಲಿ ರಥೋತ್ಸವ ಸಾಗಿತು. ದೇವಾಲಯದ ಜೀಣೋರ್ದ್ಧಾರ ಸಮಿತಿಯಿಂದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆ ವಿತರಿಸಲಾಯಿತು.
ಚಂದ್ರಗ್ರಹಣ ಪ್ರಯುಕ್ತ ಮಧ್ಯಾಹ್ನ 1 ಕ್ಕೆ : ದೇವಾಲಯ ಬಾಗಿಲು ಬಂದ್​ ಮಾಡಲಾಯಿತು. ದೂರದಿಂದ ಬಂದ ಭಕ್ತರಿಗೆ ದರ್ಶನ ಸಿಗದೇ ಹಾಗೇ ವಾಪಸ್​ ಆದರೆ, ಸಂಜೆ 7ರ ನಂತರ ದೇವಾಲಯವನ್ನು ಸ್ಚಚ್ಛ
ಗೊಳಿಸಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ದೇವನಹಳ್ಳಿ ಮಾಜಿ ಶಾಸಕ ನಿಸರ್ಗ
ನಾರಾಯಣಸ್ಮಾಮಿ, ಕೆಪಿಪಿಸಿ ಸದಸ್ಯ ಎಸ್​.ಆರ್​.ಮುನಿರಾಜು, ಜಿಪಂಮಾಜಿ ಸದಸ್ಯ ಎನ್​.ಅರವಿಂದ್​, ಕೆಪಿಸಿಸಿ ಸದಸ್ಯ ಎಸ್​.ಆರ್​.ಮುನಿರಾಜು, ತೂಬಗೆರೆ ಹೋಬಳಿ ಕಾಂಗ್ರೆಸ್​ ಟಕದ ಅಧ್ಯಕ್ಷ ರವಿಸಿದ್ದಪ್ಪ, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಉದಯ ಆರಾಧ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net