Vijay Mallaya : ಮಾಜಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಲಲಿತ್ ಮೋದಿ ಲಂಡನ್‌ನಲ್ಲಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ(Vijay Mallaya) ಅವರ ಹುಟ್ಟುಹಬ್ಬ ಪೂರ್ವ ಆಚರಣೆಯನ್ನು ಆಯೋಜಿಸಿದ್ದು ಇದೀಗ ವೈರಲ್ ಆಗಿದ್ದು, ಅವರ ಬೆಲ್‌ಗ್ರೇವ್ ಸ್ಕ್ವೇರ್ ನಿವಾಸದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಹಾಜರಿದ್ದರು. ಅತಿಥಿಗಳ ಪಟ್ಟಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ, ನಟಿ ಇದ್ರಿಸ್ ಎಲ್ಬಾ ಮತ್ತು ಫ್ಯಾಷನ್ ಡಿಸೈನರ್ ಮನೋವಿರಾಜ್ ಖೋಸ್ಲಾ ಇದ್ದರು. ಸಂಜೆ ಹೊರಬಿದ್ದ ಫೋಟೊದಲ್ಲಿ ಮಜುಂದಾರ್-ಶಾ ಒಂದು ಫ್ರೇಮ್‌ನಲ್ಲಿ ಖೋಸ್ಲಾ ಜೊತೆ ಪೋಸ್ ನೀಡುತ್ತಿರುವುದನ್ನು ಮತ್ತು ಇನ್ನೊಂದು ಫ್ರೇಮ್‌ನಲ್ಲಿ ಎಲ್ಬಾ ಜೊತೆ ಮಾತನಾಡುತ್ತಿರುವ ಪೋಟೊ ವೈರಲ್ ಆಗಿವೆ. ಛಾಯಾಗ್ರಾಹಕ ಜಿಮ್ ರೈಡೆಲ್ ಅವರು X ನಲ್ಲಿ ಲಲಿತ್ ಮೋದಿ ಮತ್ತು ಮಲ್ಯ ಅವರ ಚಿತ್ರವನ್ನು ಹಂಚಿಕೊಂಡಿದ್ದು, ಲಂಡನ್ನಿನ ತಮ್ಮ ಮನೆಯಲ್ಲಿ ಮಲ್ಯ ಅವರ ಗೌರವಾರ್ಥವಾಗಿ 70 ನೇ ಹುಟ್ಟುಹಬ್ಬಕ್ಕೂ ಮುನ್ನ ಅದ್ಭುತ ಪಾರ್ಟಿ ಆಯೋಜಿಸಿದ್ದಕ್ಕಾಗಿ ಮೋದಿಯವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.