Lakshmi Venkataramana Swamy Chariot Festival is over
Published on:
Copied
Follow Us
ಎಂ.ಎನ್.ಕೋಟೆ:ಗುಬ್ಬಿ ತಾಲೂಕಿನ ಇತಿಹಾಸ ಪ್ರಸಿದ್ಧ ಅಳಿಲಘಟ್ಟದ ಶ್ರೀ ಲಕ್ಷಿ$್ಮ ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ನಡುವೆ ಬುಧವಾರ ಅದ್ದೂರಿಯಾಗಿ ನೆರವೇರಿತು.
ರಥೋತ್ಸವದ ಪ್ರಯುಕ್ತ ಲಕ್ಷಿ$್ಮವೆಂಕಟರಮಣಸ್ವಾಮಿಗೆ ಬೆಳಗ್ಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ಸಾಗಸಂದ್ರ ಶ್ರೀ ಕೆಂಪಮ್ಮ ದೇವಿಯ ಆಗಮನದೊಂದಿಗೆ ಶ್ರೀ ಲಕ್ಷಿ$್ಮವೆಂಕಟರಮಣ ಸ್ವಾಮಿ ಹಾಗೂ ಶ್ರೀ ಕೆಂಪಮ್ಮ ದೇವಿಯ ಉತ್ಸವ ನಡೆಯಿತು. ವಾಡಿಕೆಯಂತೆ ಮಧ್ಯಾಹ್ನ ಆರಂಭವಾದ ಬ್ರಹ್ಮರಥೋತ್ಸವಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಸುಡು ಬಿಸಿಲು ಲೆಕ್ಕಿಸದೆ ಜೈಘೋಷ ಕೂಗುತ್ತಾ ರಥ ಎಳೆದರು. ನಗಾರಿವಾದ್ಯ, ಬಸವಣ್ಣನ ಉತ್ಸವ ನೋಡುಗರನ್ನು ಆಕರ್ಷಿಸಿತು. ಭಕ್ತರಿಗೆ ಮಹಾದಾಸೋಹ ಹಮ್ಮಿಕೊಳ್ಳಲಾಗಿತ್ತು.
ಮುಖಂಡರಾದ ಪುಟ್ಟರಾಜು, ನಾಗೇಶ್, ಶ್ರೀನಿವಾಸ್, ಲೋಕೇಶ್, ನಾಗಪ್ಪ, ಕೆಂಪರಾಜು, ಗೋಪಾಲಶೆಟ್ಟಿ, ಕಾಂತರಾಜು, ಗೋಪಿನಾಥ್, ಅರ್ಚಕ ಹರೀಶ್, ದೇವಾಲಯ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.