ತಡಶೀಟ್ಟದಲ್ಲಿ ಲಕ್ಷಿ$್ಮನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಜೋರು / TYAMAGONDLU

 ತ್ಯಾಮಗೊಂಡ್ಲು ಹೋಬಳಿಯ ತಡಸೀಟ್ಟ  ಗ್ರಾಮದ ಶ್ರೀ ಲಕ್ಷಿ$್ಮನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ತ್ಯಾಮಗೊಂಡ್ಲು ಹೋಬಳಿಯ ತಡಸೀಟ್ಟ ಗ್ರಾಮದ ಶ್ರೀ ಲಕ್ಷಿ$್ಮನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on
ತ್ಯಾಮಗೊಂಡ್ಲು : ಪ್ರತಿ ವರ್ಷದ ವಾಡಿಕೆಯಂತೆ ಬೆಳಗ್ಗೆಯಿಂದಲೂ ಅಲ್ಲೆಲ್ಲೂ ಕಾಣಿಸದ ಮೂರು ಗರುಡ ಪಗಳು 11.45 ಕ್ಕೆ ಸರಿಯಾಗಿ ರಥದ ಕಳಸ ಪ್ರದಣೆ ಮಾಡಿದ ತಕ್ಷಣ ಭಕ್ತರ ಜಯಘೋಷದೊಂದಿಗೆ ಪ್ರಸಿದ್ಧ ತಡಶೀಟ್ಟದ ಶ್ರೀ ಲಕ್ಷಿ$್ಮ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಅದ್ದೂರಿಯಾಗಿ ನೆರವೇರಿತು. ಈ ಕೌತುಕದ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಯಾದರು.
ವಾಡಿಕೆಯಂತೆ ಮಧ್ಯಾಹ್ನ 1 ರಿಂದ 2ರವರೆಗೆ ನಡೆಯಬೇಕಿದ್ದ ರಥೋತ್ಸವ ಚಂದ್ರಗ್ರಹಣ ಹಿನ್ನೆಲೆ 12 ರೊಳಗೆ ರಥೋತ್ಸವ ನೆರವೇರಿತು.ದೇವಸ್ಥಾನದ ಸುತ್ತ ಪ್ರದಣೆ ಹಾಕಿಸಿ ರಥವನ್ನು ಸ್ವಸ್ಥಾನಕ್ಕೆ ಸೇರಿಸಿ ಉತ್ಸವ ಮೂರ್ತಿಯನ್ನು ದೇವಾಲಯದೊಳಗೆ ಕರೆದೊಯ್ಯಲಾಯಿತು.
ತಡಸೀಟ್ಟದ ಪಟೇಲ್​ ಲೇಟ್​ ನರಸೇಗೌಡ, ಓಬಳಾಪುರದ ಕಟ್ಟೆಮನೆ ಕುಟುಂಬ, ಸಿಂಪಾಡಿಪುರದ ಮಹಿಮಣ್ಣ, ತಿಪ್ಪೇನಹಳ್ಳಿ ಜಿ.ನರಸಿಂಹಮೂರ್ತಿ, ಬೆತ್ತನಗೆರೆ ಮಾರೇಗೌಡ ವಂಶಸ್ಥರು, ಆರ್ಯವೈಶ್ಯ ಭಕ್ತ ಮಂಡಳಿ, ಓಬಳಾಪುರ ನಾರಾಯಣಪ್ಪ, ತುಮಕೂರಿನ ಲೇಟ್​ ನಂಜೇಗೌಡರ ಕುಟುಂಬ ಮತ್ತು ಇತರರಿಂದ ವಂಶಪಾರಂಪರ್ಯವಾಗಿ ಈ ಬ್ರಹ್ಮರಥೋತ್ಸವದ ದಿನದ ಸೇವೆಯನ್ನು ನಡೆಸಿಕೊಟ್ಟರು.
ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಭಕ್ತರು ಆಗಮಿಸಿ ಈ ವರ್ಷ ರಥೋತ್ಸವಕ್ಕೆ ಹಾಜರಿದ್ದರು. 20 ಕ್ಕೂ ಹೆಚ್ಚು ವಿವಿಧ ಕುಟುಂಬದವರು ಅರವಂಟಿಗೆ ಸ್ಥಾಪಿಸಿ ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಕೋಸಂಬರಿ ಹಂಚುತ್ತಿರುವ ದೃಶ್ಯ ಕಂಡುಬಂತು. ಇನ್ನೂ ಅನೇಕರ ಮನೆಗಳಲ್ಲಿ ಆಹ್ವಾನಿತರಿಗೆ ಹಬ್ಬದೂಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಬೆಳಗಿನಿಂದಲೂ ಅರ್ಚಕ ಲ್ಮಕಾಂತ್​, ಸಂಕರ್ಷಣ ಆಗಮಿಕ ಡಿ.ನಾರಾಯಣಭಟ್ಟ ಅವರು ಹೋಮ ಹವನಗಳನ್ನು ನಡೆಸಿಕೊಟ್ಟರು. ಯಾವುದೇ ಅಹಿತಕರ ಟನೆ ನಡೆಯದಂತೆ ತ್ಯಾಮಗೊಂಡ್ಲು ಪೊಲೀಸ್​ ಇನ್​ಸ್ಪೆಕ್ಟರ್​ ಎಂ.ಎಲ್​.ಗಿರೀಶ್​ ಪೋಸರ ವ್ಯಾಪಕ ಬಂದೋಬಸ್ತನ್ನು ಏರ್ಪಡಿಸಿದ್ದರು.
ಬ್ರಹ್ಮರಥೋತ್ಸವದಲ್ಲಿ ದೊಡ್ಡಬೆಲೆ ಗ್ರಾಪಂ ಮಾಜಿ ಅಧ್ಯೆ ಮಂಗಳಾ ನಟರಾಜು, ಗ್ರಾಪಂ ಮಾಜಿ ಸದಸ್ಯರಾದ ಎ.ಮಂಜುನಾಥ್​, ಅಪ್ಪಾಜಿ, ದೊಡ್ಡಬೆಲೆ ಪಿಡಿಒ ವೆಂಕಟೇಶ್​ ಇನಾಂದಾರ್​, ತಡಶೀಟ್ಟ ಡೇರಿ ಅಧ್ಯಕ್ಷ ಲ್ಮನಾರಾಯಣ್​, ಮಾಜಿ ಅಧ್ಯಕ್ಷ ಲೋಕೇಶ್​, ದೊಡ್ಡಬೆಲೆ ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್​, ಮುಖಂಡರಾದ ತಡಶೀಟ್ಟ ನಟರಾಜ್​, ತಡಶೀಟ್ಟ ಚಂದ್ರಣ್ಣ, ತಡಶೀಟ್ಟ ನರಸೇಗೌಡ, ದೊಡ್ಡಬೆಲೆ ಪುಟ್ಟಸ್ವಾಮಿ, ಇಸುವನಹಳ್ಳಿಪಾಳ್ಯ ಭೋಜಣ್ಣ, ಟಿ.ಎನ್​.ಹನುಮಂತರಾಜು, ಕೊಡಿಗೇಹಳ್ಳಿ ಮಂಜುನಾಥ್​, ಬೈರೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net