ಕೆರೆಯ ಮಣ್ಣನ್ನು ಇಟ್ಟಿಗೆ ಕಾರ್ಖಾನೆಗೆ ನೀಡುವುದಿಲ್ಲ

Lake soil will not be given to brick factories.
Lake soil will not be given to brick factories.
Published on
ಹುತ್ರಿದುರ್ಗ: ಕುಣಿಗಲ್​ ತಾಲೂಕಿನ ಹುತ್ರಿದುರ್ಗ ವ್ಯಾಪ್ತಿಯ ಕಿತ್ತಿನಾಮಂಗಲ ಗ್ರಾಮದ ಕೆರೆಯ ಫಲವತ್ತಾದ ಮಣ್ಣನ್ನು ಇಟ್ಟಿಗೆ ಕಾರ್ಖಾನೆಗಳಿಗೆ ನೀಡಲು ಅನುಮತಿ ನೀಡಿರುವುದನ್ನು ವಿರೋಧಿಸಿ ಮಂಗಳವಾರ ರೈತರು ಪ್ರತಿಭಟಿಸಿದರು.
ರೈತರು ಮಾತನಾಡಿ, ನಮ್ಮ ಜೀವನಾಡಿಯಾಗಿರುವ ಕೆರೆಯ ಫಲವತ್ತಾದ ಮಣ್ಣನ್ನು ಖಾಸಗಿ ಇಟ್ಟಿಗೆ ಕಾರ್ಖಾನೆಗ ಸಾಗಾಟ ಮಾಡಲು ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಆದರೆ ರೈತರ ತೋಟಗಳಿಂದ ಸವಕಳಿಯಾಗಿ ಬಂದ ಮಣ್ಣನ್ನು ಮಾರುವುದಾದರೆ ರೈತರು ತಮ್ಮ ಭೂಮಿಯ ಫಲವತ್ತತೆ ಹೆಚ್ಚಿಸಲು ಎಲ್ಲಿಗೆ ಹೋಗಬೇಕು?. ಕೂಡಲೆ ಈ ನಿರ್ಧಾರವನ್ನು ಶಾಸಕರು ಹಾಗೂ ಅಧಿಕಾರಿಗಳು ಕೈ ಬಿಡಬೇಕು. ಇಲ್ಲಾವಾದರೆ ಸಣ್ಣ ನೀರಾವರಿ ಇಲಾಖೆ ಕಚೇರಿಯ ಮುಂಭಾಗ ವಿಷದ ಬಾಟಲ್​ ಹಿಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಶಿವಣ್ಣ ಮಾತನಾಡಿ, ಶಾಸಕರ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಈಗಿನ ಶಾಸಕರಿಗೆ ಚಿನ್ನದಂತ ಅವಕಾಶ ಇದ್ದು, ಈ ಅವಧಿಯಲ್ಲಿ ರೈತರಿಗೆ ಬೇಕಾದಂತಹ ಅನುಕೂಲಗಳನ್ನು ಶಾಸಕರು ಮಾಡಬಹುದು. ಕೇವಲ ಐದು ಕಿಮೀ ಅಂತರದಲ್ಲಿ ಹರಿಯುವ ಹೇಮಾವತಿ ನೀರನ್ನು ಶಾಸಕರು ಕಸಬಾ ಹೋಬಳಿಯ 380 ಎಕರೆ ವ್ಯಾಪ್ತಿ ಒಳಗೊಂಡಿರುವ ಕಿತ್ತಿನಾಮಂಗಲ ಕೆರೆಗೆ ಹರಿಸಿ ಕೆರೆ ತುಂಬಿಸಿದ್ದರೆ ಹಿತ್ತಲಹಳ್ಳಿ,ಕಲ್ಲುಪಾಳ್ಯ, ಸಾಲುಪಾಳ್ಯ, ಗಂಟ್ಕನಹಳ್ಳಿ, ಗುಜ್ಜೆನಹಳ್ಳಿ ಅಯ್ಯನಕಟ್ಟೆ, ಹೊಸಕೆರೆ, ಕುರುವೇಗೌಡನಪಾಳ್ಯ, ಮುನಿಯನಪಾಳ್ಯ, ಗೊಲ್ಲರಹಟ್ಟಿ, ಕಾಡು ಮತ್ತಿಕೆರೆ ಒಳಗೊಂಡಂತೆ ಸುಮಾರು 40 ಹಳ್ಳಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ತಾಪಂ ಮಾಜಿ ಸದಸ್ಯ ಕುಮಾರ್​, ಮುಖಂಡರಾದ ಬ್ರಹ್ಮಕುಮಾರ್​, ರಾಮಚಂದ್ರಯ್ಯ, ಶಿವಲಿಂಗಯ್ಯ, ರಂಗಯ್ಯ, ಜಗದೀಶ್​, ಒಳಗೊಂಡಂತೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net