ಕೆರೆ ಪುನರುಜ್ಜೀವನ ಸಮಾಜಮುಖಿ ಕಾರ್ಯ

Lake revival is a social work
Lake revival is a social work
Published on
ಗೌರಿಬಿದನೂರು: ತಾಲೂಕಿನ ಕೆರೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಗೌರಿಬಿದನೂರು ಸೇವಾ ಪ್ರತಿಷ್ಠಾನದಹಿರಿಯ ಅಧಿಕಾರಿ ವರಪ್ರಸಾದ್​ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಒಳ್ಳೆಯ ಸಮಾಜಮುಖಿ ಕಾರ್ಯ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಪೋತೇನಹಳ್ಳಿ ರಾಮಣ್ಣ ತಿಳಿಸಿದರು.
ಗೌರಿಬಿದನೂರು ಸೇವಾ ಪ್ರತಿಷ್ಠಾನ ಟ್ರಸ್ಟ್​ ವತಿಯಿಂದ 15ನೇ ಕೆರೆ ಪುನರುಜ್ಜೀವನ ಕಾರ್ಯಕ್ರಮವಾಗಿ ಪೊತೇನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಬುಧವಾರ ಸಂಪ್ರದಾಯಬದ್ಧ ಗಂಗಾ ಆಹ್ವಾನ ಪೂಜೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರದ ಯಾವುದೇ ನೆರವು ಅಥವಾ ಸಹಾಯವಿಲ್ಲದೆ, ಸಂಪೂರ್ಣವಾಗಿ ಜನರ ಸಹಭಾಗಿತ್ವ ಮತ್ತು ಸಮುದಾಯದ ಬೆಂಬಲದೊಂದಿಗೆ ಈ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆರೆಗಳಿಂದ ತೆಗೆಯುವ ಪೋಷಕಾಂಶಯುಕ್ತ ಮಣ್ಣನ್ನು ಕೃಷಿ ಜಮೀನುಗಳಿಗೆ ಬಳಸಿಕೊಳ್ಳುವ ಮಹತ್ವ ಹಾಗೂ ಸಾಂಪ್ರದಾಯಿಕ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಟ್ರಸ್ಟ್​ ಅಧ್ಯ ವೇಣುಗೋಪಾಲ್​ ಅವರು, ಕೆರೆ ಮಣ್ಣಿನ ತಾಂತ್ರಿಕ ಲಾಭಗಳನ್ನು ವಿವರಿಸಿದರು. ಒಂದು ಟ್ರಾಕ್ಟರ್​ ಲೋಡ್​ ಮಣ್ಣು ಒಂದು ಚೀಲ ಕಾಂಪೋಸ್ಟ್​ , ಯೂರಿಯಾ ಮತ್ತು ಡಿಎಪಿ ಗೊಬ್ಬರಕ್ಕೆ ಸಮಾನವಾಗಿದೆ. ಇದರಿಂದ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ, ಇದು ಸಹಜ ಮತ್ತು ಸಾಸ್ಯೋತ್ಪಾದನೆಗೆ ಉತ್ತೇಜನ ನೀಡಿ ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಟ್ರಸ್ಟ್​ ಉಪಾಧ್ಯ ಸಂಜೀವ್​ ರೆಡ್ಡಿ ಮಾತನಾಡಿ, ಪುನರುಜ್ಜೀವನಗೊಂಡ ಕೆರೆಗಳು ಗ್ರಾಮ ಮಟ್ಟದಲ್ಲಿ ಜಲ ಸ್ವಾವಲಂಬನೆ ಸಾಧಿಸಲು ಸಹಕಾರಿಯಾಗುತ್ತವೆ. ಜನರು, ಪಶು&ಪಗಳು ಹಾಗೂ ಮೀನುಗಾರಿಕೆಗೆ ಸಹ ಉಪಯುಕ್ತವಾಗುತ್ತವೆ ಎಂದು ಹೇಳಿದರು.
90 ಎಕರೆ ವಿಸ್ತೀರ್ಣವಿರುವ ಪೋತೇನಹಳ್ಳಿ ಕೆರೆಯಲ್ಲಿ ಸುಮಾರು 8,16,000 ಟನ್​ ಮಣ್ಣು ತೆಗೆಯುವುದರಿಂದ 36 ಕೋಟಿ ಲೀಟರ್​ ನೀರು ಸಂಗ್ರಹಗೊಳ್ಳಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net