ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಿರೀಕ್ಷಕರು ಮತ್ತು ಉಪ ನಿರೀಕ್ಷಕರ ಮಧ್ಯೆ ಉಂಟಾಗಿರುವ ಹೊಂದಾಣಿಕೆ ಕೊರತೆಯಿಂದ ಆಡಳಿತಾತ್ಮಕ ಕಾರ್ಯಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತದೆ.
ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಮತ್ತು ಸಾಗಾಟ ಸಂಬಂಧ ಉಪನಿರೀಕ್ಷಕರು ಹಲವು ಕೇಸ್ ದಾಖಲಿಸುತ್ತಿದ್ದಾರೆ. ಅಬಕಾರಿ ಕೈಪಿಡಿಯ ಅನುಸಾರ ಕಾರ್ಯನಿರ್ವಹಿಸಿ ಸರ್ಕಾರಕ್ಕೆ ಹೆಚ್ಚು ರಾಜಸ್ವ ತರಲು ಶ್ರಮಿಸುತ್ತಿದ್ದಾರೆ. ನಿರೀಕ್ಷಕರು ಮತ್ತು ಉಪ ನಿರೀಕ್ಷಕರ ಹುದ್ದೆಗಳಿಗೆ ಕೌನ್ಸಿಲಿಂಗ್ ಮುಖೇನ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯಾದ ಸ್ಥಳಕ್ಕೆ ಆ ಅಧಿಕಾರಿಯು 3 ವರ್ಷ ಕಡ್ಡಾಯವಾಗಿ ಕೆಲಸ ಮಾಡಬೇಕು. ಆದರೆ, ನೀರಿಕ್ಷಕರು ಮತ್ತು ಉಪ ನಿರೀಕ್ಷಕರ ಮಧ್ಯೆ ಹೊಂದಾಣಿಕೆಯ ಸಮಸ್ಯೆ ಇರುವ ಕಾರಣ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ ಎಂಬ ಆರೋಪ ಇದೆ.
ಇದೇರೀತಿ ಮುಂದುವರೆದರೆ ಅಬಕಾರಿ ಆದಾಯದಲ್ಲಿ ಕುಂಠಿತವಾಗುವ ಸಾದ್ಯತೆ ಇದೆ. ಆದ್ದರಿಂದ, ಹಿರಿಯ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.