ಕಾರ್ಮಿಕ ಮಂಡಳಿ ಭ್ರಷ್ಟಾಚಾರದ ಕೇಂದ್ರ labour day

ಬಂಗಾರಪೇಟೆ labour day ತಾಲೂಕು ಕಾರಹಳ್ಳಿ ವೃತ್ತದಲ್ಲಿ ಸಿಐಟಿಯು ಸಂಘಟನೆಯಿಂದ ಹಮ್ಮಿಕೊಂಡಿದ್ದ 140ನೇ ಕಾರ್ಮಿಕ ದಿನಾಚರಣೆ ಬಹಿರಂಗ ಸಭೆಯಲ್ಲಿ ಸಿ.ರಾಮೂರ್ತಿ, ಜಯಲಕ್ಷಿ$್ಮ, ಕೇಶವರಾವ್​, ಮೋಹನ್​, ಪಿಚ್ಚುಕಣ್ಣು, ಅಪ್ಪಯ್ಯ ಇದ್ದರು.
ಬಂಗಾರಪೇಟೆ labour day ತಾಲೂಕು ಕಾರಹಳ್ಳಿ ವೃತ್ತದಲ್ಲಿ ಸಿಐಟಿಯು ಸಂಘಟನೆಯಿಂದ ಹಮ್ಮಿಕೊಂಡಿದ್ದ 140ನೇ ಕಾರ್ಮಿಕ ದಿನಾಚರಣೆ ಬಹಿರಂಗ ಸಭೆಯಲ್ಲಿ ಸಿ.ರಾಮೂರ್ತಿ, ಜಯಲಕ್ಷಿ$್ಮ, ಕೇಶವರಾವ್​, ಮೋಹನ್​, ಪಿಚ್ಚುಕಣ್ಣು, ಅಪ್ಪಯ್ಯ ಇದ್ದರು.
Published on
ಬಂಗಾರಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಪೊರೇಟ್​ ಕಂಪನಿಗಳ labour day ಪರ ನಡೆದುಕೊಳ್ಳುತ್ತಿದ್ದು, ಕಾರ್ಮಿಕರ ಹಕ್ಕುಗಳನ್ನು ಕಡಿಮೆ ಮಾಡುವ ನೀತಿಗಳನ್ನು ಜಾರಿಗೊಳಿಸುತ್ತಿವೆ ಎಂದು ಕಾರ್ಮಿಕ ಮುಖಂಡ ಪಿ.ಶ್ರೀನಿವಾಸ್​ ಆರೋಪಿಸಿದರು.
ತಾಲೂಕಿನ ಕಾರಹಳ್ಳಿ ವೃತ್ತದಲ್ಲಿ ಸಿಐಟಿಯು ಸಂಘಟನೆಯಿಂದ ಹಮ್ಮಿಕೊಂಡಿದ್ದ 140ನೇ ಕಾರ್ಮಿಕ ದಿನಾಚರಣೆ ಬಹಿರಂಗ ಸಭೆಯಲ್ಲಿ ಮಾತನಾಡಿ, 140 ವರ್ಷಗಳ ಕಾರ್ಮಿಕ ಹೋರಾಟದಿಂದ ದೊರೆತ 8 ಗಂಟೆ ಕೆಲಸ, 8 ಗಂಟೆ ವಿಶ್ರಾಂತಿ ಹಾಗೂ 8 ಗಂಟೆ ಮನೋರಂಜನೆ ಹಕ್ಕುಗಳನ್ನು ಸರ್ಕಾರಗಳು ದುರ್ಬಲಗೊಳಿಸುತ್ತಿವೆ. ಬಿಸಿಯೂಟ ಕಾರ್ಮಿಕರಿಗೆ ಕನಿಷ್ಠ 31 ಸಾವಿರ ವೇತನ ನೀಡುವ ಸಮಿತಿಯ ಶಿಫಾರಸು ಜಾರಿಯಾಗಿಲ್ಲ ಎಂದು ಟೀಕಿಸಿದರು.
ಕಟ್ಟಡ ಕಾರ್ಮಿಕರಿಗಾಗಿ ಘೋಷಿಸಿದ 19 ಸೌಲಭ್ಯ ಸಮರ್ಪಕವಾಗಿ ಜಾರಿಯಾಗಿಲ್ಲ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದು ದೂರಿದರು.
ಪತ್ರಕರ್ತ ಆರ್​.ರಾಮಕೃಷ್ಣ ಮಾತನಾಡಿ, ಕಾರ್ಮಿಕರ ಹೋರಾಟ ಮತ್ತು ತ್ಯಾಗದ ಫಲವಾಗಿ ದೊರೆತ ಇಎಸ್​ಐ, ಪಿಎಫ್​, ಹೆರಿಗೆ ರಜೆ ಸೇರಿ ಹಲವು ಸೌಲಭ್ಯ ಸರ್ಕಾರಗಳು ಹಿಂಪಡೆಯಲು ಯತ್ನಿಸುತ್ತಿವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net