ಕಾರ್ಮಿಕ ಸಂಹಿತೆಯಿಂದ ಶ್ರಮಿಕರಿಗೆ ಮೋಸ / DODABALLAPUR

ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸೆಂಟರ್​ ಆಫ್​ ಟ್ರೇಡ್​ ಯೂನಿಯನ್ಸ್​ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಮೀನಾಕ್ಷಿ ಸುಂದರಂ ಮಾತನಾಡಿದರು. ಜಿಲ್ಲಾಧ್ಯಕ್ಷ, ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್​, ಖಜಾಂಚಿ ಮೋಹನ್​ ಬಾಬು ಇತರರು ಇದ್ದರು.
ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸೆಂಟರ್​ ಆಫ್​ ಟ್ರೇಡ್​ ಯೂನಿಯನ್ಸ್​ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಮೀನಾಕ್ಷಿ ಸುಂದರಂ ಮಾತನಾಡಿದರು. ಜಿಲ್ಲಾಧ್ಯಕ್ಷ, ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್​, ಖಜಾಂಚಿ ಮೋಹನ್​ ಬಾಬು ಇತರರು ಇದ್ದರು.
Published on
ದೊಡ್ಡಬಳ್ಳಾಪುರ : ದುಡಿಯುವ ವರ್ಗದ ವಿರುದ್ಧ ಬಿಜೆಪಿ ಇದೆ ಎಂಬುದಕ್ಕೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಕಾರ್ಮಿಕ ಸಂಹಿತೆಗಳ ನಿಯಮಾವಳಿಗಳ ಅಧಿಸೂಚನೆಯೇ ಸಾ. ಇದು ದೇಶದ ಕಾರ್ಮಿಕರಿಗೆ ಮಾಡಿದ ವಂಚನೆ ಎಂದು ಸೆಂಟರ್​ ಆಫ್​ ಟ್ರೇಡ್​ ಯೂನಿಯನ್ಸ್​ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಮೀನಾಕ್ಷಿಸುಂದರಂ ಆರೋಪಿಸಿದರು.
ನಗರದಲ್ಲಿ ಸಿಐಟಿಯು ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯ ಗಾಳಿಗೆ ತೂರಿ ಕೇಂದ್ರ ಪ್ರಕಟಿಸಿದ ಕರಡು ನಿಯಮಾವಳಿಗಳಿಗೆ ಕಾರ್ಮಿಕ ಸಂಘಟನೆಗಳು ಹಾಗೂ ಸಿಐಟಿಯು ಸಂಘಟನೆ ಸಲ್ಲಿಸಿದ ಯಾವುದೇ ಆಕ್ಷೇಪಣೆ ಪರಿಗಣಿಸದೆ 2026ರಲ್ಲಿ ಅಂತಿಮ ನಿಯಮಾವಳಿ ಪ್ರಕಟಿಸಿ ನಾಲ್ಕು ಸಂಹಿತೆ ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಕಾರ್ಮಿಕರು ನಿರಂತರವಾಗಿ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರೂ ಕಾಪೋರ್ರೇಟ್​ ಬಂಡವಾಳದಾರರ ಅನುಕೂಲಕ್ಕಾಗಿ ನಾಲ್ಕು ಸಂಹಿತೆ ಜಾರಿಗೆ ತರಲಾಗಿದೆ. ಸಿಐಟಿಯು ಸಂಘಟನೆಯು "ಈ ಸಂಹಿತೆಗಳನ್ನು ಕಾರ್ಮಿಕರ ಜೀವನ ಮತ್ತು ಜೀವನೋಪಾಯಗಳ ಮೇಲಿನ ನರಮೇಧದ ದಾಳಿಗಳೆಂದು ಪರಿಗಣಿಸುತ್ತವೆ'. "ಇದು ಕಾರ್ಮಿಕರ ಮೇಲೆ ಗುಲಾಮಗಿರಿ ಹೇರುವುದಲ್ಲದೇ, ಕಾರ್ಮಿಕರ ಹಕ್ಕು ಹಾಗೂ ಪ್ರತಿಭಟಿಸುವ ಅವಕಾಶ ಕಸಿದುಕೊಳ್ಳುತ್ತವೆ ಎಂದರು.
ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಹೆಚ್ಚುತ್ತಿರುವ ನಿರುದ್ಯೋಗದ ಬಿಕ್ಕಟ್ಟು, ಏರುತ್ತಿರುವ ಹಣದುಬ್ಬರ, ಬೆಲೆ ಏರಿಕೆ ಹಾಗೂ ಜೀವನದ ಕಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ. ಕೇಂದ್ರವು ಜನರ ಮೇಲೆ ಯುದ್ಧ ಸಾರಿದಂತಿದೆ ಎಂದು ಟೀಕಿಸಿದರು.
ಉಪಾಧ್ಯಕ್ಷರಾದ ಎಸ್​.ತಿರುಮಲಾಚಾರಿ, ಎನ್​.ಕೆ.ಬಸವರಾಜು, ವೀರಣ್ಣ, ಎ.ಎಸ್​.ಎನ್​.ಶಂಬಣ್ಣ, ವಿಷಕಂಠ, ಮಂಜುನಾಥ, ಕಾರ್ಯದರ್ಶಿಗಳಾದ ಅಂಜುಮ್​ ಖಾನ್​, ಎಲ್​.ಸಿ.ಸುಮಾ, ವೈ.ಎಸ್​.ಮಧು, ಅನಿಲ್​ ಗುಪ್ತ, ಪಿ.ಕೆ.ವೆಂಕಟೇಶ್​ ಇತರರು ಇದ್ದರು.
ರಾಜ್ಯದಲ್ಲಿ ಅನುಷ್ಠಾನ ಬೇಡ : ಕಾಂಗ್ರೆಸ್​ ಸಂಹಿತೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಬಾರದು. ದೇಶದ ಸಂವಿಧಾನವು ಖಾತರಿ ಪಡಿಸುವ ಒಕ್ಕೂಟ ತತ್ವಗಳನ್ನು ಆಧರಿಸಿ ರಾಜ್ಯದ ಶ್ರಮ ಜೀವಿಗಳ ಹಿತ ರಕ್ಷಿಸಲು ಮುಂದಾಗಬೇಕು ಎಂದು ಸಿಐಟಿಯು ಒತ್ತಾಯಿಸಿದೆ.
ಪ್ರತಿಭಟನೆಗೆ ಕರೆ : ಸಿಐಟಿಯುನಿಂದ ಮೇ 12ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ಕೆಲಸದ ಸ್ಥಳಗಳಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕೇಂದ್ರ ರೂಪಿಸಿರುವ ನಿಯಮಾವಳಿಗಳ ಪ್ರತಿಗಳನ್ನು ಸಾಮೂಹಿಕವಾಗಿ ಸುಡುವ ಮೂಲಕ ಪ್ರತಿಭಟಿಸಲು ಸಿಐಟಿಯು ರಾಜ್ಯ ಸಮಿತಿ ಕರೆ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net