ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನು ಅಗಲಿದ ಪತ್ರಕರ್ತರಾದ ಬೀದರನ ನಾಗಶೆಟ್ಟಿ ಧರಂಪುರ, ಸಂಜೆವಾಣಿ ದೊಡ್ಡಬೊಮ್ಮಯ್ಯ, ಸಂಯುಕ್ತ ಕರ್ನಾಟಕದ ಭೀಮಸೇನ ಪದಕಿ, ಬೆಳಗಾವಿಯ ಎಂ.ಎನ್.ಪಾಟೀಲ, ಸಕಲೇಶಪುರದ ಎಂ.ಎನ್.ಶಿವಕುಮಾರ್, ಪ್ರಜಾವಾಣಿಯ ಬಾವು ಪತ್ತಾರ, ಕಲಬುರ್ಗಿ ಪ್ರಭುಲಿಂಗ ನೀಲೂರೆ, ರಾಯಚೂರು ನಹೀಮ್ ಅಶ್ರ್, ಮೈಸೂರಿನ ಸೂರಜ್, ವಿಜಯಪುರದ ಧಾವಲ್ ೋರ್ಪಡೆ ಅವರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದು ನಿಮಿಷ ಮೌನಾಚರಣೆ ಮಾಡಿ ಸಂತಾಪ ಕೋರಲಾಯಿತು.