ನಾನು ನೇರವಾಗಿ ಲಿಫ್ಟ್ ಹತ್ತಿಕೊಂಡು ಬಂದು ಪತ್ರಕರ್ತನಾದವನಲ್ಲ. ಒಂದೊಂದಾಗಿ ಮೆಟ್ಟಿಲುಗಳನ್ನು ಹತ್ತಿಕೊಂಡು ಈ ಸ್ಥಾನಕ್ಕೆ ಬಂದವನು. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಅತ್ಯಂತ ಅವಶ್ಯ. ಮೊದಲು ನಾನು ಕೋಲಾರವಾಣಿ ಪತ್ರಿಕೆಯಲ್ಲಿ ಕೆಲಸ ಮಾಡಿ, ಆ ಪರಿವಾರದಲ್ಲಿ ಊಟ ಮಾಡಿ ಬೆಳೆದಿದ್ದೇನೆ. ಸೈಕಲ್‌ನಲ್ಲಿ ಪತ್ರಿಕೆಗಳನ್ನು ಪೇರಿಸಿಕೊಂಡು ಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡಿದ್ದೇನೆ. ಅವರೊಂದಿಗೆ ಕುಟುಂಬದ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಬೆಂಗಳೂರಿಗೆ ಬರಲು ಹಿರಿಯ ಪತ್ರಕರ್ತರಾದ ವಾಸುದೇವ ಹೊಳ್ಳ, ಮಂಜುನಾಥ್, ಗೋಪಿನಾಥ್ ಮತ್ತಿತರರು ಕಾರಣ. ಅವರ ಪ್ರೀತಿ, ವಾತ್ಸಲ್ಯ ಎಂದಿಗೂ ಮರೆಯಲಾರೆ ಎಂದು ಪ್ರಭಾಕರ್ ಹೇಳಿದರು.