ಬಾಲಕಿಯರ ವಿಭಾಗ: ವೈಯಕ್ತಿಕ ವಿಭಾಗದ 100, 200ಮೀ. ಓಟದಲ್ಲಿ ಅ್ಸಾನಾ ತಹಶೀಲ್ದಾರ್, 400 ಮೀ. ಓಟದಲ್ಲಿ ಗಂಗಮ್ಮ ಕೊಡ್ಲಿವಾಡ, 600 ಮೀ. ಓಟದಲ್ಲಿ ಸಾವಿತ್ರಿ ಹಾಲಪ್ಪಗೋಳ ಹಾಗೂ ಎತ್ತರ ಜಿಗಿತದಲ್ಲಿ ಸಂಗೀತಾ ಬಬ್ಬಾನಿ ಪ್ರಥಮ, 200 ಮೀ. ಓಟದಲ್ಲಿ ಸಾವಿತ್ರಿ ಹಾಲಪ್ಪಗೋಳ, ಉದ್ದ ಜಿಗಿತದಲ್ಲಿ ಸಂಗೀತಾ ಬಬ್ಬಾನಿ, ಎತ್ತರ ಜಿಗಿತದಲ್ಲಿ ಸೌಜನ್ಯಾ ಕೊಡ್ಲಿವಾಡ ದ್ವೀತಿಯ, ಬಾಲಕಿಯರ ಗುಂಪು ವಿಭಾಗದ 4ಗಿ100 ಮೀ. ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ಬಾಲಕಿಯರ ವಿಭಾಗದ ವೀರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ ಬಿ.ಬಿ.ಪಟಗುಂದಿ ತರಬೇತಿ ನೀಡಿದ್ದರು.