ಅಪಘಾತ ಮಾರ್ಗವಾದ ಕುಂಚಾವರಂ-ಶಾದಿಪುರ ರಸ್ತೆ

ಶಾದಿಪುರದಿಂದ ಕುಂಚಾವರಂ ಕ್ರಾಸ್​ವರೆಗಿನ ರಸ್ತೆಯಲ್ಲಿ ಅಪಘಾತದಿಂದ ನಜ್ಜುಗುಜ್ಜಾಗಿರುವ ಲಾರಿ.
ಶಾದಿಪುರದಿಂದ ಕುಂಚಾವರಂ ಕ್ರಾಸ್​ವರೆಗಿನ ರಸ್ತೆಯಲ್ಲಿ ಅಪಘಾತದಿಂದ ನಜ್ಜುಗುಜ್ಜಾಗಿರುವ ಲಾರಿ.
Published on

ಪ್ರಮುಖ ಮುಖ್ಯಾಂಶಗಳು

  • ಬೃಹತ್​ ವಾಹನಗಳ ಓಡಾಟದಿಂದ ರೋಡ್​ ಹಾಳು
  • ವನ್ಯಜಿವಿಗಳಿಗೂ ಕಿರಿಕಿರಿ
ಚಿಂಚೋಳಿ : ಕುಂಚಾವರಂ ಕ್ರಾಸ್​ನಿಂದ ಶಾದಿಪುರವರೆಗಿನ ರಸ್ತೆ ಅಪಘಾತ ಮಾರ್ಗವಾಗಿ ಮಾರ್ಪಟ್ಟಿದ್ದು, ನಿತ್ಯ ಬೃಹತ್​ ವಾಹನಗಳ ಸಂಚಾರದಿಂದ ಸ್ಥಳಿಯ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.
ಸುಮಾರು 18 ಕಿಮೀ. ರಸ್ತೆ ಇದಾಗಿದ್ದು, ನಿರಂತರ ಬೃಹತ್​ ಗಾತ್ರದ ಸರಕು ಸಾಗಣೆ ವಾಹನ ತಿರುಗಾಟ ನಡೆಸುತ್ತಿವೆ. ಇದರಿಂದ ರಸ್ತೆ ಹಾಳಾಗಿದೆ. ರಸ್ತೆಯುದ್ದಕ್ಕೂ ಬೃಹತ್​ ಗುಂಡಿಗಳು ಬಿದ್ದಿದ್ದು, ಡಾಂಬರ್​ ಕಿತ್ತುಹೋಗಿದೆ. ಅಲ್ಲದೆ ದಟ್ಟವಾದ ಅರಣ್ಯದ ಒಡಲಲ್ಲಿ ರೋಡ್​ ಹಾದು ಹೋಗುವುದರಿಂದ ವಾಹನಗಳ ಅತಿಯಾದ ಸದ್ದು, ಮಾಲಿನ್ಯದಿಂದ ವನ್ಯಜಿವಿಗಳ ಮುಕ್ತ ಸಂಚಾರಕ್ಕೂ ಅಡ್ಡಿ ಉಂಟುಮಾಡುತ್ತಿದೆ.
ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಸಾರ್ವಜನಿಕರಿಗೆ ಸಾರಿಗೆ ಸಂಚಾರ ವಿಳಂಬವಾಗುತ್ತಿದ್ದು, ಶಾಲಾ& ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕಚೇರಿಗೆ ಹೋಗುವ ನೌಕರರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಹದಗೆಟ್ಟ ರಸ್ತೆ ಸರಿಪಡಿಸಬೇಕು. ಬೃಹತ್​ ವಾಹನಗಳ ಓಡಾಟಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
"

ಪ್ರಸ್ತುತ ಬೃಹತ್​ ಗಾತ್ರದ ವಾಹನಗಳ ಸಂಚಾರದಿಂದ ವನ್ಯಜಿವಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಅತಿ ವೇಗ, ಶಬ್ದ ಮಾಲಿನ್ಯದಿಂದ ಪ್ರಾಣಿಗಳಿಗೆ ಕಿರಿಕಿರಿ ಆಗುತ್ತದೆ. ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಬೇಕಿದ್ದು, ಈ ನಿಟ್ಟಿನಲ್ಲಿ ಸೂಕ್ಷ್ಮವಾಗಿ ನಿಗಾ ವಹಿಸುತ್ತಿದ್ದೇವೆ.

— ಸುನೀಲಕುಮಾರ ಚವ್ಹಾಣ್​, ಎಎಸ್​ಎಫ್​, ಚಿಂಚೋಳಿ ವಿಭಾಗ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net