ಕುಮಾರ ಕೃಪದ ಹಳೆಯ ಕಟ್ಟಡ ಇನ್ಮುಂದೆ ಸಿಎಂ ಅಧಿಕೃತ ನಿವಾಸ; ಗಂಗಾ ಎಂದು ಮರುನಾಮಕರಣ: ಸಿಎಂ ಡಿಕೆಶಿಯಿಂದ ಗೃಹ ಪ್ರವೇಶ | CM residence

ಕುಮಾರ ಕೃಪ ರಸ್ತೆಯಲ್ಲಿರುವ ಕುಮಾರ ಕೃಪದ ಹಳೆಯ ವಸತಿ ಗೃಹ ಕಟ್ಟಡವನ್ನು ನವೀಕರಣ ಮಾಡಲಾಗಿದ್ದು, ಇನ್ಮುಂದೆ ಅದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಮತ್ತು ಕಟ್ಟಡಕ್ಕೆ 'ಗಂಗಾ' ಎಂದು ಮರುನಾಮಕರಣ ಮಾಡಲಾಗಿದೆ.
ಕುಮಾರ ಕೃಪದ ಹಳೆಯ ಕಟ್ಟಡ ಇನ್ಮುಂದೆ ಸಿಎಂ ಅಧಿಕೃತ ನಿವಾಸ; ಗಂಗಾ ಎಂದು ಮರುನಾಮಕರಣ: ಸಿಎಂ ಡಿಕೆಶಿಯಿಂದ ಗೃಹ ಪ್ರವೇಶ | CM residence
Published on: 

ಬೆಂಗಳೂರು: ನಗರದ ಕುಮಾರ ಕೃಪ ರಸ್ತೆಯಲ್ಲಿರುವ ಕುಮಾರ ಕೃಪದ ಹಳೆಯ ವಸತಿ ಗೃಹ ಕಟ್ಟಡವನ್ನು ನವೀಕರಣ ಮಾಡಲಾಗಿದ್ದು, ಇನ್ಮುಂದೆ ಅದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಮತ್ತು ಕಟ್ಟಡಕ್ಕೆ 'ಗಂಗಾ' ಎಂದು ಮರುನಾಮಕರಣ ಮಾಡಲಾಗಿದೆ.

ಈ ಕುರಿತು ರಾಜ್ಯಪಾಲರ ಹೆಸರಿನಲ್ಲಿ ಆದೇಶ ಹೊರಿಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ, ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿ ಸರ್ಕಾರಿ ವಸತಿ ಗೃಹದ ಕಟ್ಟಡವಾದ ಕುಮಾರ ಕೃಪ ಅತಿಥಿ ಗೃಹದ ಹಳೆಯ ಕಟ್ಟಡವನ್ನು ಗಂಗಾ ಎಂದು ಮರುನಾಮಕರಣ ಮಾಡಲಾಗಿದ್ದು, ಅದು ಇನ್ಮುಂದೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿರಲಿದೆ ಎಂದು ತಿಳಿಸಲಾಗಿದೆ.

Also Read
135 ವರ್ಷದ ಹಳೆಯ ಸೆಂಟ್ರಲ್ ಸೆಕ್ರೆಟರಿಯೇಟ್ ಲೈಬ್ರರಿ ಸ್ಥಳಾಂತರ!; ನಿಮಗೆ ಬೇಡವಾದ್ರೆ ಬೇರೆ ದೇಶಕ್ಕೆ ಕೊಡಿ: ಕೇಂದ್ರದ ವಿರುದ್ಧ ಸುಪ್ರೀಂ ಆಕ್ರೋಶ |Supreme Court
ಕುಮಾರ ಕೃಪದ ಹಳೆಯ ಕಟ್ಟಡ ಇನ್ಮುಂದೆ ಸಿಎಂ ಅಧಿಕೃತ ನಿವಾಸ; ಗಂಗಾ ಎಂದು ಮರುನಾಮಕರಣ: ಸಿಎಂ ಡಿಕೆಶಿಯಿಂದ ಗೃಹ ಪ್ರವೇಶ | CM residence

ಇದಕ್ಕೂ ಮುಂಚೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಅಪರ ಮುಖ್ಯ ಕಾರ್ಯದರ್ಶಿಯವರು, ಸರ್ಕಾರಕ್ಕೆ ಹಳೆಯ ಕಟ್ಟಡವನ್ನು ನವೀಕರಿಸುವ ಮತ್ತು ಮತ್ತು ಕಟ್ಟಡವನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸವೆಂದು ಘೋಷಿಸುವಂತೆ ಕೋರಿದ್ದರು ಎನ್ನಲಾಗಿದೆ.

ಹೊಸ ನಿವಾಸದ ಬಗ್ಗೆ ಸಿಎಂ ಡಿಕೆಶಿ ಪ್ರತಿಕ್ರಿಯೆ

ಕುಮಾರ ಕೃಪ ಅತಿಥಿ ಗೃಹದ ಹಳೆಯ ಕಟ್ಟಡವನ್ನು ಸಿಎಂ ಅಧಿಕೃತ ನಿವಾಸ ಎಂದು ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ನಾನು ನನ್ನ ಖಾಸಗಿ ನಿವಾಸ ಬಿಟ್ಟು ಕುಮಾರ ಕೃಪದ ಸರ್ಕಾರಿ ನಿವಾಸ ಪಡೆದುಕೊಂಡಿದ್ದೆ. ಕುಮಾರ ಕೃಪಾ ದಲ್ಲಿ ಶೇ.10ರಷ್ಟು ರಿನೋವೇಷನ್ ಮಾಡಿದ್ದೇನೆ, ಹೆರಿಟೇಜ್ ಹಾಗೆ ಉಳಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Also Read
ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ವಿಚಾರ; ಗೆಲ್ಲುವ ಸಾಧ್ಯತೆ ನೋಡಿ ಕ್ಷೇತ್ರಗಳ ಹಂಚಿಕೆ: ಅಖಿಲೇಶ್ ಯಾದವ್ | Akhilesh Yadav
ಕುಮಾರ ಕೃಪದ ಹಳೆಯ ಕಟ್ಟಡ ಇನ್ಮುಂದೆ ಸಿಎಂ ಅಧಿಕೃತ ನಿವಾಸ; ಗಂಗಾ ಎಂದು ಮರುನಾಮಕರಣ: ಸಿಎಂ ಡಿಕೆಶಿಯಿಂದ ಗೃಹ ಪ್ರವೇಶ | CM residence

ಇಂದು ಖಾಸಗಿಯಾಗಿ ಪೂಜೆ ಮಾಡಿದ್ದೇನೆ, ಗುರುವಾರ 224 ಶಾಸಕರಿಗೆ, ಸಚಿವರಿಗೆ ಹಾಗೂ ಸಂಸದರಿಗೆ ಆಹ್ವಾನಿಸುತ್ತೇನೆ. ಗುರುವಾರದಿಂದ ಇಲ್ಲಿಯೇ ಸಾರ್ವಜನಿಕರನ್ನು ಭೇಟಿ ಮಾಡುತ್ತೇನೆ. ಎಷ್ಟು ಖರ್ಚಾಗಿರಹುದು ಎಂದು ಕೆಲವರಿಗೆ ಗಾಬರಿ ಆಗಿರಬಹುದು. ಸೆಕ್ಯೂರಿಟಿಗಾಗಿ ಸ್ವಲ್ಪ ಖರ್ಚಾಗಿರಬಹುದು, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಕಡಿಮೆ ವೆಚ್ಚದ ಕಲ್ಲನ್ನು ಬಳಕೆ ಮಾಡಲಾಗಿದೆ. ಮತ್ತು ನನ್ನ ಮನೆಯಲ್ಲಿನ ಪರ್ನಿಚರ್ ಬಳಕೆ ಮಾಡಿದ್ದೇನೆ. ವಿಪಕ್ಷಗಳು ಇರೋದೆ ವಿರೋದ ಮಾಡೋದಕ್ಕೆ, ಅವರನ್ನು ಸಹ ಕರಿಯುತ್ತೇನೆ. ನಾವ್ಯಾರು ಪರ್ಮನೆಂಟ್ ಆಗಿ ಇಲ್ಲಿ ಇರಲ್ಲ. ಆದರೂ, ಸಿಎಂ ಆಗಿರೋರಿಗೆ ಒಂದು ಮನೆ ಬೇಕಲ್ಲವೇ? ಇನ್ಮುಂದೆ ಇದೇ ಸಿಎಂ ಅಧಿಕೃತ ನಿವಾಸ ಎಂದು ಹೇಳಿದ್ದಾರೆ.