ಮಧ್ಯಪ್ರದೇಶದ ಸಿಎಂ ಭೇಟಿಯಾದ ಕೆಎಸ್‌ಬಿಡಿಬಿ ಅಧ್ಯಕ್ಷ; ಜೈವಿಕ ಇಂಧನ ಕಾರ್ಯ ಯೋಜನೆಗಳ ವಿಚಾರ ವಿನಿಮಯ

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಭೇಟಿಯಾಗಿ, ಜೈವಿಕ ಇಂಧನ ಕಾರ್ಯ ಯೋಜನೆಗಳು ಕುರಿತು ವಿಚಾರ ವಿನಿಮಯ ಮಾಡಿದರು.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಭೇಟಿಯಾಗಿ, ಜೈವಿಕ ಇಂಧನ ಕಾರ್ಯ ಯೋಜನೆಗಳು ಕುರಿತು ವಿಚಾರ ವಿನಿಮಯ ಮಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಎಸ್​ಬಿಡಿಬಿ ಅಧ್ಯಕ್ಷ - ಮಧ್ಯಪ್ರದೇಶದ ಮುಖ್ಯಮಂತ್ರಿ ಭೇಟಿ
  • ಎಸ್.ಈ.ಸುಧೀಂದ್ರ ಮೋಹನ್ ಯಾದವ್ ವಿಚಾರ ವಿನಿಮಯ
  • ಜೈವಿಕ ಇಂಧನ ಕಾರ್ಯ ಯೋಜನೆಗಳು ಕುರಿತು ಚರ್ಚೆ

ಬೆಂಗಳೂರು:ಕರ್ನಾಟಕ ರಾಜ್ಯಜೈವಿಕ ಇಂಧನ ಅಭಿವೃದ್ಧಿ ಮಂಡಳಿ(ಕೆಎಸ್‌ಬಿಡಿಬಿ)ಯಅಧ್ಯಕ್ಷ ಎಸ್..ಸುಧೀಂದ್ರ ಬೆಂಗಳೂರು ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಮಧ್ಯಪ್ರದೇಶದಮುಖ್ಯಮಂತ್ರಿ ಮೋಹನ್ ಯಾದವ್ಅವರನ್ನು ಭೇಟಿಯಾಗಿ,ಮಧ್ಯಪ್ರದೇಶರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವಜೈವಿಕ ಇಂಧನ ಕಾರ್ಯ ಯೋಜನೆಗಳುಹಾಗೂ ರಾಜ್ಯದಲ್ಲಿ ಉದ್ದೇಶಿತಜೈವಿಕ ಇಂಧನ ನೀತಿ ಮತ್ತುಕೈಗೊಳ್ಳಲಿರುವ ಕಾರ್ಯ ಯೋಜನೆಗಳಕುರಿತು ವಿಚಾರ ವಿನಿಮಯ ಮಾಡಿಕೊಂಡರು.

ಈಸಂದರ್ಭದಲ್ಲಿ ಎರಡು ರಾಜ್ಯಗಳಉದ್ದೇಶಿತ ಜೈವಿಕ ಇಂಧನ ಕ್ಷೇತ್ರದಅಭಿವೃದ್ಧಿ,ಕೇಂದ್ರ ಸರ್ಕಾರದನೂತನ ಮತ್ತು ಪುನರ್ ಉತ್ಪಾದಿಸಲ್ಪಡುವಇಂಧನಗಳ ಬಳಕೆಯನ್ನು 2027ರೊಳಗಾಗಿ ಶೇಕಡ30ರಷ್ಟುಗುರಿ ಸಾಧಿಸುವುದಕ್ಕೆ ಪೂರಕವಾಗಿರುವುದರಕುರಿತು ಚರ್ಚಿಸಿದರು.

ಮುಂಬರುವದಿನಗಳಲ್ಲಿ ಎರಡು ರಾಜ್ಯಗಳುಪರಸ್ಪರ ಹೊಂದಾಣಿಕೆಯೊಂದಿಗೆ ಜೈವಿಕ ಇಂಧನಗಳಾದ ಬಯೋ ಬ್ರಿಕೆಟ್ಸ್,ಬಯೋಪಿಲೆಟ್ಸ್,ಬಯೋಡೀಸೆಲ್,ಕಂಪ್ರೆಸ್ಡ್ಬಯೋ ಗ್ಯಾಸ್,ಗ್ರೀನ್ ಹೈಡ್ರೋಜನ್ಉತ್ಪಾದನಾ ಕ್ಷೇತ್ರಗಳಲ್ಲಿಬಂಡವಾಳ ಹೂಡಿಕೆದಾರರು ಹಾಗೂಜೈವಿಕ ಇಂಧನ ಸಂಪನ್ಮೂಲಗಳಪೂರೈಕೆದಾರರಾದ ಅದರಲ್ಲೂ ಮುಖ್ಯವಾಗಿರೈತ ಸಮುದಾಯದೊಂದಿಗೆ ಸಮನ್ವಯಸಾಧಿಸುವುದರ ಕುರಿತು ಮಾರ್ಗಸೂಚಿಗಳನ್ನುರೂಪಿಸುವುದು ಅತ್ಯಗತ್ಯವಾಗಿದೆಎಂದು ಮಂಡಳಿಯ ಅಧ್ಯಕ್ಷರುಅಭಿಪ್ರಾಯಪಟ್ಟರು.

ಕರ್ನಾಟಕರಾಜ್ಯದ ಸಿಎಂ ಸಿದ್ದರಾಮಯ್ಯಹಾಗೂ ಗ್ರಾಮೀಣ ಅಭಿವೃದ್ಧಿ ಮತ್ತುಪಂಚಾಯತ್ ರಾಜ್ ಹಾಗೂ ಐಟಿಬಿಟಿಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದಲ್ಲಿಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗಾಗಿನಿರಂತರವಾಗಿ ಪ್ರೋತ್ಸಾಹನೀಡುತ್ತಿರುವುದರ ಕುರಿತು ಮಂಡಳಿಯಅಧ್ಯಕ್ಷರು ವಿವರಿಸಿದರು.ಮಂಡಳಿ ರಾಜ್ಯದಲ್ಲಿಕೈಗೊಂಡಿರುವ ಜೈವಿಕ ಇಂಧನ ಕ್ಷೇತ್ರದಅಭಿವೃದ್ಧಿ ಯೋಜನೆಗಳ ಕುರಿತುಮಧ್ಯಪ್ರದೇಶ ಸಿಎಂ ಮೆಚ್ಚುಗೆವ್ಯಕ್ತಪಡಿಸಿ ಮಧ್ಯಪ್ರದೇಶರಾಜ್ಯದಲ್ಲಿ ಜೈವಿಕ ಇಂಧನ ನೀತಿಯಡಿಅನುಷ್ಠಾನಗೊಳಿಸಿರುವ ಹಾಗೂಪ್ರಗತಿಯಲ್ಲಿರುವ ಜೈವಿಕ ಇಂಧನಕಾರ್ಯ ಯೋಜನೆಗಳ ಪೂರ್ಣ ಪರಿಚಯಹಾಗೂ ವಾಸ್ತವಿಕ ಸ್ಥಿತಿಗತಿಗಳನ್ನುಅವಲೋಕಿಸಲು ಮಂಡಳಿಯ ನಿಯೋಗವನ್ನು ಆಹ್ವಾನಿಸಿದರು.

ಮಂಡಳಿಯವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ್,ಯೋಜನಾ ಸಲಹೆಗಾರರಾದಡಾ. ಜಿ.ಎನ್.ದಯಾನಂದ,ಅಧ್ಯಕ್ಷರಸಲಹೆಗಾರರಾದ ನಿಮ್ಮನ್ ದೀಪ್ಸಿಂಗ್, ಕರಪಕಲಗೋವಿಂದರಾಜು ಹರೀಶ್ ಇನ್ನಿತರಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net