ಕೃಷ್ಣನ ತತ್ವಗಳು ಪ್ರತಿಯೊಬ್ಬರಿಗೂ ಮಾರ್ಗದರ್ಶಿ

ಸುರಪುರ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು. ಶಾಸಕ ರಾಜಾ ವೇಣುಗೋಪಾಲ ನಾಯಕ, ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ವೆಂಕೋಬ ಯಾದವ, ತಹಸೀಲ್ದಾರ್ ಎಚ್.ಎ.ಸರಕಾವಸ್ ಇತರರಿದ್ದರು.
ಸುರಪುರ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು. ಶಾಸಕ ರಾಜಾ ವೇಣುಗೋಪಾಲ ನಾಯಕ, ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ವೆಂಕೋಬ ಯಾದವ, ತಹಸೀಲ್ದಾರ್ ಎಚ್.ಎ.ಸರಕಾವಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜಾ ವೇಣುಗೋಪಾಲ ನಾಯಕ ಅನಿಸಿಕೆ
  • ಸುರಪುರ ತಹಸಿಲ್‌ನಲ್ಲಿ ಜಯಂತಿ ಆಚರಣೆ
ಸುರಪುರ: ಶ್ರೀಕೃಷ್ಣ ಪರಮಾತ್ಮನ ಜೀವನದ ಆದರ್ಶಗಳು ಧರ್ಮ, ಸತ್ಯ ಹಾಗೂ ಕರ್ತವ್ಯದ ಮಹತ್ವ ಸಾರುತ್ತವೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ನಗರದ ತಹಸಿಲ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧರ್ಮದ ವಿರುದ್ಧ ಧರ್ಮದ ವಿಜಯದ ಸಂದೇಶ ನೀಡಿದ ಶ್ರೀಕೃಷ್ಣನ ತತ್ವಗಳು ಪ್ರತಿಯೊಬ್ಬರ ಬದುಕಿಗೂ ಮಾರ್ಗದರ್ಶಿಯಾಗಿವೆ ಎಂದರು.
ಶ್ರೀಕೃಷ್ಣ ಜೀವನವು ಧರ್ಮದ ಮಾರ್ಗದಲ್ಲಿ ನಡೆಯುವ ಮಹತ್ವ ಸಾರುತ್ತದೆ. ಭಗವದ್ಗೀತೆಯ ಮೂಲಕ ಕರ್ಮವೇ ಜೀವನದ ಶ್ರೇಷ್ಠ ಮಾರ್ಗ ಎಂಬ ಸಂದೇಶ ಸಾರಿದರು. ಶ್ರೀಕೃಷ್ಣ ಪರಮಾತ್ಮ ಬೋಽಸಿದ ಭಗವದ್ಗೀತೆ ಬದುಕಿಗೆ ದಾರಿದೀಪವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಚ್.ಎ.ಸರಕಾವಸ್ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ನಡೆಯಿತು. ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ಮುಖಂಡ ವೆಂಕೋಬ ಯಾದವ ಮಂಗಳೂರು ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net