ಸಮಾಜದ ಪ್ರವರ್ತಕ ಕ್ರಾಂತಿಕಾರಿ ಬಸವಣ್ಣ Krantikari Basavanna
ಸಮಾಜದ ಪ್ರವರ್ತಕ ಕ್ರಾಂತಿಕಾರಿ ಬಸವಣ್ಣ Krantikari Basavanna
Published on:
Copied
Follow Us
ಮುಳಬಾಗಿಲು: ಬಸವಣ್ಣ 12ನೇ ಶತಮಾನದ ವ್ಯಕ್ತಿಯಾಗಿದ್ದರೂ ಇಂದಿಗೂ ನಾವು ಅವರ ತತ್ವಗಳನ್ನು ಅನುಸರಿಸುತ್ತಿದ್ದೇವೆ. ಆದ್ದರಿಂದ ಬಸವಣ್ಣ ಸಮಾಜದ ಪ್ರವರ್ತಕರು ಎನ್ನಲಾಗುತ್ತದೆ ಎಂದು ತಹಸೀಲ್ದಾರ್ ವಿ.ಗೀತಾ ಹೇಳಿದರು.Krantikari Basavanna
ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವೀರಶೈವ ಸಮುದಾಯದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಮಾತನಾಡಿ, ಬಸವಣ್ಣ ಸಾಮಾನ್ಯ ಮನುಷ್ಯನ ರೀತಿ ಜೀವನ ನಡೆಸಿದವರಲ್ಲ. ಅವರು ಸಮಾಜದ ಪ್ರವರ್ತಕರು. ಶತಮಾನ ಕಳೆದರೂ ಪ್ರತಿ ಕಾಲಕ್ಕೂ ಸಾರ್ವಕಾಲಿಕವಾಗಿ ಇರುವುದು ಅಷ್ಟು ಸುಲಭದ ಮಾತಲ್ಲ ಎಂದು ಹೇಳಿದರು.
ವಚನಗಳು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ರೀತಿ ಅಂತರಂಗ ಮತ್ತು ಬಹಿರಂಗದ ಶುದ್ದಿಯ ಬಗ್ಗೆ ವಚನಗಳ ಮೂಲಕ ಸರಳವಾಗಿ ಹೇಳಿದರು. ದೇವರು ನಮ್ಮಲ್ಲಿಯೆ ಇದ್ದಾರೆ. ದೇಹವೇ ದೇವಾಲಯ ಹಾಗಾಗಿ ಕಾಣದ ದೇವರನ್ನು ಹುಡುಕದೆ ನಿನ್ನಲ್ಲಿನ ಸತ್ಯ ತಿಳಿದುಕೊಳ್ಳಲು ಮುಂದಾಗು ಎಂದು ಜನಸಾಮಾನ್ಯರಿಗೆ ತಿಳಿಸಿದರು.
ಅವರ ವಚನಗಳಲ್ಲಿ ಬದುಕು ಕಟ್ಟಿಕೊಳ್ಳುವುದು, ಸಹಬಾಳ್ವೆ, ಸಮಾನತೆ, ಸಹೋದರತ್ವ, ಸ್ತ್ರೀ ಬಗ್ಗೆ ಗೌರವ ಸೇರಿದಂತೆ ಸಮಾಜಕ್ಕೆ ನಾನಾ ರೀತಿಯ ಸಂದೇಶ ಕೊಡುವ ಸಾರ ಇತ್ತು.
ಬಸವಣ್ಣನಿಗೆ ರಾಜಯೋಗ ಅನುಭವಿಸುವ ಅವಕಾಶ ಇದ್ದರೂ ಜಾತಿ, ಧರ್ಮ, ಅಸ್ಪ-----ೃಶ್ಯತೆ, ಮಡಿವಂತಿಕೆ ಹಾಗೂ ಗೊಡ್ಡು ಸಂಪ್ರದಾಯ ಹೋಗಲಾಡಿಸಲು ಜನರ ಮಧ್ಯೆ ಬದುಕು ದೂಡಿದರು ಎಂದು ಹೇಳಿದರು.
ಯಾವುದೇ ಭೇದ&ಭಾವ, ಅಂತಸ್ತು, ಲಿಂಗ ತಾರತಮ್ಯ ಇಲ್ಲದೆ ಬಸವಣ್ಣ ಅವರ ವಚನಗಳನ್ನು ತಿಳಿದುಕೊಳ್ಳಬಹುದು. ಇದಕ್ಕೆ ಓದು ಬರಹದ ವಿದ್ಯಾಭ್ಯಾಸ ಅಡ್ಡಿಯಾಗುವುದಿಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿ ಸಹ ವಚನಗಳನ್ನು ಓದುವುದು, ಬರೆಯುವುದು, ಕೇಳುವುದು, ಹೇಳುವ ಪರಿಪಾಠ ಮೈಗೂಡಿಸಿಕೊಳ್ಳಬಹುದು ಎಂದು ಹೇಳಿದರು.
ನಗರದ ಮುಖ್ಯಬಿದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಪದ್ಮಘಟ್ಚ ವಿಶ್ವನಾಥ, ಶೆಟ್ಟಿಬನಕನಹಳ್ಳಿ ಶಿವು, ಬಸವರಾಜ್, ಶಿಕ್ಷಕಿ ತಾಯಲೂರು ರಾಜೇಶ್ವರಿ, ಶಂಕರಪ್ಪ, ನಗರಸಭೆ ಪೌರಾಯುಕ್ತ ಆಂಜನೇಯಲು ಇದ್ದರು.