

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕರ್ನಾಟಕವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ಡಿಎಲ್ಆರ್ ಅಳವಡಿಕೆ ಮೂಲಕ ರಾಜ್ಯದ ವಿದ್ಯುತ್ಪ್ರಸರಣ ಜಾಲದ ಆಧುನೀಕರಣದತ್ತಮಹತ್ವದ ಹೆಜ್ಜೆಯನ್ನಿಟ್ಟಿದೆ.ಶೂನ್ಯ ವೆಚ್ಚದಲ್ಲಿರಾಜ್ಯದ ವಿದ್ಯುತ್ ಪ್ರಸರಣಸಾಮರ್ಥ್ಯವನ್ನು ಶೇ.25ರಷ್ಟುಹೆಚ್ಚಳ ಮಾಡುವ ನಿಟ್ಟಿನಲ್ಲಿಅತ್ಯಾಧುನಿಕ ತಂತ್ರಜ್ಞಾನಅಳವಡಿಕೆಗೆ ಮುಂದಾಗಿದೆ.ಪ್ರಾಯೋಗಿಕವಾಗಿ ಬೆಂಗಳೂರು ನಗರದ ಪುಟ್ಟೇನಹಳ್ಳಿ- ಸಹಕಾರನಗರ220 ಕೆವಿವಿದ್ಯುತ್ ಪ್ರಸರಣ ಮಾರ್ಗದಲ್ಲಿ‘ಡೈನಾಮಿಕ್ ಲೈನ್ ರೇಟಿಂಗ್’(ಡಿಎಲ್‌ಆರ್)ಪ್ರಾಯೋಗಿಕಯೋಜನೆ ಆಳವಡಿಕೆಯನ್ನು ಆರಂಭಿಸಿದೆ.
ಯೋಜನೆಯಅನುಷ್ಠಾನಕ್ಕೆ ಕಾರ್ಯಾದೇಶನೀಡಲಾಗಿದ್ದು,ಈ ಮೂಲಕ ಅತ್ಯಾಧುನಿಕತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವದಕ್ಷಿಣ ಭಾರತದ ಮೊದಲ ರಾಜ್ಯವಿದ್ಯುತ್ ಪ್ರಸರಣ ನಿಗಮವಾಗಿಹೊರ ಹೊಮ್ಮಿದೆ.ಈ ಹೊಸ ತಂತ್ರಜ್ಞಾನದಮೂಲಕ, ಯಾವುದೇಹೆಚ್ಚುವರಿ ಟವರ್‌ಗಳ ನಿರ್ಮಾಣಅಥವಾ ಹೊಸ ಭೂ ಸ್ವಾಧೀನದ ಅಗತ್ಯವಿಲ್ಲದೆ,ಅಸ್ತಿತ್ವದಲ್ಲಿರುವಮೂಲಸೌಕರ್ಯದ ವಿದ್ಯುತ್ ಪ್ರಸರಣಸಾಮರ್ಥ್ಯವನ್ನು ಶೇ.25ರಷ್ಟು ಹೆಚ್ಚಿಸುವಗುರಿಯನ್ನು ನಿಗಮ ಹೊಂದಿದೆ.
‘ಡೈನಾಮಿಕ್ಲೈನ್ ರೇಟಿಂಗ್ (ಡಿಎಲ್‌ಆರ್)ತಂತ್ರಜ್ಞಾನವಾಸ್ತವಿಕ ಪರಿಸ್ಥಿತಿಗೆ ತಕ್ಕಂತೆಬದಲಾಗುವ ಆಧುನಿಕ ತಂತ್ರಜ್ಞಾನವಾಗಿದ್ದು,ತಂತಿಗಳ ಮೇಲೆಅಳವಡಿಸುವ ಸ್ಮಾರ್ಟ್ ಸೆನ್ಸಾರ್‌ಗಳುಗಾಳಿಯ ವೇಗ,ತಾಪಮಾನ ಮುಂತಾದವನ್ನುಕ್ಷಣಕ್ಷಣಕ್ಕೂ ಗಮನಿಸುತ್ತವೆ.ಗಾಳಿ ಬೀಸುತ್ತಿದ್ದರೆತಂತಿಗಳು ತಂಪಾಗಿರುತ್ತವೆ,ಅಂತಹ ಸಮಯದಲ್ಲಿಆ ತಂತಿಗಳು ಹೆಚ್ಚು ವಿದ್ಯುತ್ಸಾಗಿಸಲು ಸಿದ್ಧವಿರುತ್ತವೆ.ಈ ತಂತ್ರಜ್ಞಾನಅಂತಹ ಪರಿಸ್ಥಿತಿಯನ್ನು ಗ್ರಹಿಸಿ,ವ್ಯರ್ಥವಾಗುತ್ತಿದ್ದಶೇ. 25ರಷ್ಟುಹೆಚ್ಚುವರಿ ಸಾಮರ್ಥ್ಯವನ್ನುಸುರಕ್ಷಿತವಾಗಿ ಬಳಸಿಕೊಳ್ಳಲುದಾರಿ ಮಾಡಿಕೊಡುತ್ತವೆ. ಹೊಸ ಟವರ್‌ಗಳನಿರ್ಮಾಣವಿಲ್ಲದೆ,ಇದ್ದ ವ್ಯವಸ್ಥೆಯಲ್ಲೇಹೆಚ್ಚು ವಿದ್ಯುತ್ ಪಡೆಯುವ ಜಾಣ್ಮೆಇದಾಗಿದೆ.