ಪ್ರಮಾಣ ಪತ್ರದಲ್ಲಿ ಅವರ ಕುಟುಂಬದ ಒಟ್ಟು ವಾರ್ಷಿಕ ಆದಾಯವು 40,000 ರೂ.ಎಂದು ನಮೂದಾಗಿರುತ್ತದೆ. ಸುಮ.ಎಸ್ ಸಾಹುಕಾರ್ ತಂದೆ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು 3-09-2019 ರಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಪ್ರತಿ ತಿಂಗಳು 2,05,100 ರೂ.ಗಳ ಮೂಲ ವೇತನ ಹಾಗೂ ಇತರೆ ಭತ್ಯೆಗಳನ್ನು ಪಡೆದಿರುತ್ತಾರೆ. ದಿನಾಂಕ 5-4-2021 ರಂದು ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಪ್ರತಿ ತಿಂಗಳು 2,25,000 ರೂ.ಗಳ ಮೂಲ ವೇತನ ಹಾಗೂ ಇತರೆ ಭತ್ಯೆಗಳನ್ನು ಪಡೆದಿರುತ್ತಾರೆ.