

ಪ್ರಮುಖ ಮುಖ್ಯಾಂಶಗಳು
ಕೋಥಳಿವಾಡಿ ಜನರಿಗೆ ಬಂತು ನೀರು
| ವಿಜಯವಾಣಿ ವರದಿ ಫಲಶೃತಿ | ಪತ್ರಿಕೆ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ತಾಲ್ಲೂಕಿನ ಕೋಥಳಿವಾಡಿ ಗ್ರಾಮದ ಲಕ್ಷ್ಮೀ ದೇವಸ್ಥಾನದ ಬಳಿ ಸ್ಥಳಿಯ ಶಾಸಕರ ಅನುದಾನದಲ್ಲಿ ಬುಧವಾರ ಬೋರವೆಲ್ ಕೊರೆಸುವ ಮೂಲಕ ಸ್ಥಳೀಯ ೭೫ಕ್ಕೂ ಅಧಿಕ ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ.
ತಾಲೂಕು ಕೇಂದ್ರದ ಕೇವಲ 12 ಕಿ.ಮಿ ದೂರದಲ್ಲಿರುವ ಈ ಗ್ರಾಮದಲ್ಲಿ ಜನರಿಗೆ ಕುಡಿಯುನೀರಿನ ಸಮಸ್ಯೆ, ಜನರು ಹನಿ ನೀರಿಗಾಗಿ ಬಾವಿ, ಬೋರವೆಲ್ ಹುಡುಕಾಡಿ ನೀರು ತರಬೇಕಿತ್ತು. ಮಹಿಳೆಯರು,ಮಕ್ಕಳು, ವೃದ್ಧರು ಜಲದಾಹ ತಣಿಸಿಕೊಳ್ಳಲು ಕೊಡ ಹಿಡಿದು ಅಲೆಯುವುದೆ ಕಾಯಕವಾಗಿತ್ತು.
ಗಮನ ಸೆಳೆದಿದ್ದ ವಿಜಯವಾಣಿ:
ಕೋಥಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಕೊಥಳಿವಾಡಿ ಗ್ರಾಮದ ಮೂಲಸೌಕರ್ಯದ ಕೊರತೆ ಕುರಿತು ವಿಜಯವಾಣಿಯಲ್ಲಿ ಜೂ.8 ರಂದು `ಮೂಲಸೌಕರ್ಯ ವಂಚಿತ ಕೋಥಳಿವಾಡಿ: ಶಿರ್ಷಿಕೆಯಡಿ ವರದಿ ಪ್ರಕಟಿಸಲಾಗಿದೆ. ಇದರಿಂದ ಎಚ್ಚತ್ತುಕೊಂಡ ಸ್ಥಳದ ಶಾಸಕರು ಗ್ರಾಮದ ದೇವಸ್ಥಾನ ಬಳಿ ಬೋರವೆಲ್ ಕೊರೆಸುವ ಮೂಲಕ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ, ಜನರಲ್ಲಿ ಸಂತಸ ಮೂಡಿಸಿದೆ.
ಗ್ರಾಮದಲ್ಲಿನ ಜನರ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಮೂಲಕ ಜನಪರ ಕಾಳಜಿ ಹೊಂದಿರುವ ವಿಜಯವಾಣಿ ಪತ್ರಿಕೆಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು ವ್ಯಕ್ತಪಡಿಸಿದ್ದಾರೆ.